ನಾನು ಪ್ರಾಥಮಿಕ ಶಾಲೆಯಲ್ಲಿ ವಿಶ್ವೇಶ್ವರಯ್ಯನವರ ಬಗ್ಗೆ ಪುಸ್ತಕದಲ್ಲಿ ಓದಿದ್ದರೂ , ಬೆಳೆದಂತೆ ಇವರ ಸಾಧನೆ ಬಗ್ಗೆ ತಿಳಿದು ಬೆರಗುಗೊಂಡೆ .
ಇತ್ತೀಚೆ ಜನವರಿಯಲ್ಲಿ ಮೋಕ್ಷಗುಂಡಮ್ ವಿಶ್ವೇಶ್ವರಯ್ಯ ಪುಸ್ತಕವನ್ನು (ಲೇಖಕ: ವಿ ಎಸ್.ನಾರಾಯಣರಾವ್ ), ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೊಂಡೆ ಮತ್ತು ಆ ಪುಸ್ತಕವನ್ನು ಓದಿ ಮುಗಿಸುವ ಭಾಗ್ಯ ನನ್ನದಾಯ್ತು .
ಅಯ್ಯನವರ ಸಾಧನೆಯು ನಮ್ಮ ಇಂದಿನ ಭ್ರಷ್ಟಾಚಾರ ಹೆಚ್ಚಿರುವ , ದೇಶಾಭಿಮಾನ ಕಡಿಮೆಯಾಗುತ್ತಿರುವ ಈ ದಿನಗಳಲಿ ನಮ್ಮ ಪೀಳಿಗೆಗೆ ಮಾದರಿ ..
ಕಿರು ಚಿತ್ರ : (Video)
ವಿಶ್ವೇಶ್ವರಯ್ಯನವರು ಜನಿಸಿದ್ದು ೧೮೬೦ ರ ಆಗಸ್ಟ್ ತಿಂಗಳ ೨೭ ರಂದು , ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಎಂಬ ಗ್ರಾಮದ ಕಣಿವೆನಾರಾಯಣಪುರ ಹೋಬಳಿಯಲ್ಲಿ .
ವಿಶ್ವೇಶ್ವರಯ್ಯನವರು ೧೫ನೆಯ ವಯಸ್ಸಿನವರಾಗಿದ್ದಾಗ, ತಂದೆ ತೀರಿಕೊಂಡರು . ತಾಯಿಯ ಸಹೋದರ ರಾಮಯ್ಯ ನವರ ಸಹಾಯದಿಂದ ಮತ್ತು ಸ್ವಂತ ಪರಿಶ್ರಮದಿಂದ ೧೮೮೧ ರಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದರು .
ವಿಶ್ವೇಶ್ವರಯ್ಯ ನವರು ಅತ್ಯಂತ ಪ್ರತಿಭಾನ್ವಿತ ಇಂಜಿನಿಯರ್ ಹಾಗೂ ದಕ್ಷ ಆಡಳಿತಗಾರರೂ ಆಗಿದ್ದರು . ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸುವುದರಲ್ಲಿ ಅವರದು ಎತ್ತಿದ ಕೈ . ಅವರ ಕುಶಲತೆ ಪ್ರತಿಭೆಗಳ ಪ್ರಮಾಣವಾಗಿ ನೀರಾವರಿ ಯೋಜನೆಗಳು , ಬೃಹತ್ ಜಲಾಶಯಗಳು , ರೈಲು ಮಾರ್ಗಗಳು , ಕಾರ್ಖಾನೆಗಳು , ಕೈಗೊರಿಕೊದ್ಯಮಗಳು , ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಸಂಘ ಸಂಸ್ಥಗಳು ಭಾರತದಾದ್ಯಂತ ಚಿರಸ್ಥಾಯಿಯಾಗಿ ಉಳಿದಿದೆ . ಪ್ರತಿಭಾನ್ವಿತ ಇಂಜಿನಿಯರ್ ಒಬ್ಬರು , ದಕ್ಷ ಆಡಳಿತಗಾರರೂ ಆಗಬಹುದು ಎಂಬುದಕ್ಕೆ ವಿಶ್ವೇಶ್ವರಯ್ಯನವರು ಸಾಕ್ಷ್ಯ ನೀಡಿದ್ದಾರೆ .
ಕೃಷ್ಣ ರಾಜ ಸಾಗರ ಆಣೆಕಟ್ಟು |
ಮಹಾತ್ಮ ಗಾಂಧಿಯವರ ಸಮಕಾಲೀನ ರಾಗಿದ್ದ ಇವರ ಮತ್ತು ಗಾಂಧಿಯವರ ಕೆಲವು ವಿಚಾರಗಳಲ್ಲಿ ಭಿನ್ನ ಅಭಿಪ್ರಾಯಗಳಿದ್ದರೂ ಇವರಿಬ್ಬರ ಗುರಿ ದೇಶ ಅಭಿವೃದ್ಧಿ ಒಂದೇ ಆಗಿತ್ತು .!
ವಿಶ್ವೇಶ್ವರಯ್ಯನವರು ನಮ್ಮ ಭಾರತ ದೇಶಕ್ಕೆ ಸಲ್ಲಿಸಿರುವ ಸೇವೆ ಅಪಾರ .
ಶಿಸ್ತಿನ ಸಿಪಾಯಿಯಾಗಿದ್ದ ಇವರು ೧೯೧೨ - ೧೯೧೯ ರವರೆಗೆ ಮೈಸೂರು ಸಂಸ್ಥಾನದ ದಿವಾನರಾಗಿದ್ದರು .
ಇವರ ಸೇವೆಯನ್ನು ಮೆಚ್ಚಿ ೧೯೫೫ ರಲ್ಲಿ ಪ್ರತಿಷ್ಟಿತ ಭಾರತ ರತ್ನ ಇವರನ್ನು ಹುಡುಕಿಕೊಂಡು ಬಂತು .
ಅವರ ಬಗ್ಗೆ ತಿಳಿಯುತ್ತ ಹೋದಂತೆ ಒಬ್ಬ ವ್ಯಕ್ತಿ ಜೀವಮಾನದಲ್ಲಿ ಇಷ್ಟೊಂದು ಸಾಧಿಸಬಹುದೇ ಎಂದು ಅಚ್ಚರಿಯಾಗುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ ..
The Knight Commander of The Indian Empire medal |
ಪ್ರತಿಷ್ಟಿತ ಭಾರತ ರತ್ನ ಪದಕ |
ದೀರ್ಘ ಕಾಲ ಸಾರ್ಥಕ ಬಾಳ್ವೆ ಬಾಳಿ ತಮ್ಮ ೧೦೨ನೆಯ ವಯಸ್ಸಿನಲ್ಲಿ ನಿಧನರಾದರು. . !
2 comments:
Very knowledgeable post. Video has covered too well.
Thanks Nirmala,for your encouraging comments.
Post a Comment