Monday, September 06, 2010

Jayashree (ಬಿ.ಜಯಶ್ರೀ)- Great Actress, mahaan nati -gayaki -kalaavide


  
ಬಿ.ಜಯಶ್ರೀ ವೃತ್ತಿರಂಗಭೂಮಿಯಿಂದ ಹಿಡಿದು,ಚಲನಚಿತ್ರ,ಕಿರುತೆರೆಯವರೆಗೆ ಎಲ್ಲ ರಂಗಗಳಲ್ಲೂ ಹೆಸರು ಮಾಡಿರುವ ಕಲಾವಿದೆ.
ರಂಗಭೂಮಿ ಮತ್ತು ಚಲನಚಿತ್ರದಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಪ್ರಸಿದ್ಧ ಗಾಯಕರೂ ಆಗಿದ್ದಾರೆ.
ಹುಟ್ಟಿದ್ದು ೧೯೫೦ , ಜೂನ್ ೯ ರಂದು ಬೆಂಗಳೂರಿನಲ್ಲಿ (1950) .ತಂದೆ ಬಸವರಾಜ್.ತಾಯಿ ಜಿ.ವಿ.ಮಾಲತಮ್ಮ.ಜಯಶ್ರೀ ವೃತ್ತಿರಂಗಭೂಮಿಯ ಹೆಸರಾಂತ ಗುಬ್ಬಿ ವೀರಣ್ಣನವರ ಮೊಮ್ಮಗಳು ಕೂಡಾ. ನಾಲ್ಕನೇ ವಯಸ್ಸಿಗೆ ಬಾಲ ಕಲಾವಿದೆಯಾಗಿ ಬಣ್ಣ ಹಚ್ಚಿದವರು ..!
ಪ್ರಸಿದ್ಧ "National school of Drama" ದಿಂದ ಪದವಿ ಪಡೆದಿದ್ದಾರೆ .


ತನ್ನ ನಾಲ್ಕನೇ ವಯಸ್ಸಿನಲ್ಲಿಯೇ ರಂಗಭೂಮಿಗೆ ಪಾದಾರ್ಪಣೆ .ರಂಗಭೂಮಿಯ  ಅಭಿಯದಿಂದ ಗಳಿಸಿದ ಜನಪ್ರಿಯತೆ ಇವರನ್ನು ನಾಟಕಗಳ ನಿರ್ದೇಶನಕ್ಕೆ ಕೊಂಡೊಯ್ದಿತು.

ಜಯಶ್ರೀ ಯವರನ್ನು  ನೋಡುವ , ಅವರ ಮಾತನ್ನು ಕೇಳುವ ಅವಕಾಶ ನನಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಈ ವರ್ಷ ಮಾರ್ಚ್ ತಿಂಗಳಲ್ಲಿ ದೊರೆಯಿತು ..

ಅವರ ಜೊತೆ ಒಂದು ಭಾವ ಚಿತ್ರ ತೆಗೆಸಿಕೊಂಡೆ ..

೨೦೦೦ ರಲ್ಲಿ ಅವರಿಂದ ನಮ್ಮ ಊರಾದ ಶಿವಮೊಗ್ಗದಲ್ಲಿ ,ಹಸ್ತಾಕ್ಷರ ಪಡೆದಿದ್ದೆ .


ಕನ್ನಡ ಚಲನಚಿತ್ರ ನಾಗಮಂಡಲ ದಲ್ಲಿ ಅಭಿನಯಿಸಿದ್ದಾರೆ.ಎಂ ಎಸ್ ಸತ್ಯು  ಅವರ "ಗಳಿಗೆ" , "ಭಾವ ಭಾಮೈದ" ಇವರ ಅಭಿನಯದ ಇತರ ಚಿತ್ರಗಳು.ಇವರು ನನ್ನ ಪ್ರೀತಿಯ ಹುಡುಗಿ ಚಿತ್ರಕ್ಕೆ ಹಾಡಿರುವ ಕಾರ್ ಕಾರ್ ಕಾರ್ ಕಾರ್,ಎಲ್ನೋಡಿ ಕಾರ್ ಎಂಬ ಗೀತೆ ಎಲ್ಲರ ಮನಸೂರೆಗೊಂಡಿದೆ.ಯಾರೇ ನೀನು ಅಭಿಮಾನಿ ಚಿತ್ರದ ಚಕ್ಕೋತ ಚಕ್ಕೋತ ಹಾಡು ಕೇಳುಗರಲ್ಲಿ ಹುಚ್ಚೆಬ್ಬಿಸಿದೆ.ಇವರ ಗಾಯನದ ಏನಾ ಏನಿದು ಎಂಥಾ ಬೆರಗಾ, ರಂಗಗಣಪ ಎಂಬ ಧ್ವನಿಸುರುಳಿಗಳು ಬಿಡುಗಡೆಯಾಗಿವೆ. ಜನಪ್ರಿಯ ಧಾರಾವಾಹಿ "ಪ್ರೀತಿ ಇಲ್ಲದ ಮೇಲೆ"ಯ ಅಜ್ಜಿ ಪಾತ್ರದಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.


ವಿದೇಶಿ ಸಂಸ್ಥೆಯ ಅನುದಾನದಿಂದ ನಿರ್ಮಿತ ನಾಟಕ ಲಕ್ಷಾಪತಿ ರಾಜನ ಕತೆ ಹಾಗೂ ವಿದೇಶದಲ್ಲೂ ಪ್ರದರ್ಶನಗೊಂಡು ಜನಮೆಚ್ಚುಗೆ ಗಳಿಸಿದ ನಾಟಕ ಕಿನ್ನರಿ ಜೋಗಿರಾಟ- ಇವರ ವೃತ್ತಿಜೀವನದ ಮೈಲಿಗಲ್ಲುಗಳು.ಸ್ವೀಡೆನ್, ಕೈರೋ ,ಸ್ಕಾಟ್ ಲ್ಯಾಂಡ್ ರಂಗೋತ್ಸವಗಳಲ್ಲಿ ಭಾಗವಹಿಸಿದ್ದಾರೆ.ಅಮೆರಿಕದಲ್ಲಿ ಹೂವಿ ನಾಟಕ ನಿರ್ದೇಶಿಸಿದ್ದಾರೆ.

ಇತ್ತೀಚೆ ರಂಗಾಯಣ ಮುಖ್ಯಸ್ಥರಾಗಿ ಕೆಲಸ ಮಾಡುವ ಅವಕಾಶ ಸಿಕ್ಕರೂ ಸರಿಯಾದ ಹೊಂದಾಣಿಕೆಯಾಗದೆ ಅದರಿಂದ ಹೊರಬಂದರು.
೧೯೯೭ ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಅವರ ಪಾಲಿಗೆ ಬಂದಿದೆ .

ಅವರ  ಸಾಧನೆಯನ್ನು ಗುರುತಿಸಿ ನಮ್ಮ ಸರ್ಕಾರ ಅವರನ್ನು ೨೦೧೦ ರಲ್ಲಿ ರಾಜ್ಯಸಭ ಸದಸ್ಯರನ್ನಾಗಿ ಆಯ್ಕೆ  ಮಾಡಿದ್ದಾರೆ.
ಜಯಶ್ರೀ ಯವರು ರಂಗಭೂಮಿಗೆ -ನಟರಿಗೆ ಮಾರ್ಗದರ್ಶಕರಾಗಿ ,ಗುರುವಾಗಿ,ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಲಿ ..