Tuesday, January 12, 2010

Kannada etta , yake,hege ?

Kannada (ಕನ್ನಡ) is one of the major Dravidian languages of India, spoken predominantly in the state of Karnataka. Kannada, whose native speakers are called Kannadigas (ಕನ್ನಡಿಗರು Kannadigaru), number roughly 38 million, making it the 27th most spoken language in the world. It is one of the scheduled languages of India and the official and administrative language of the state of Karnataka.

The Kannada language is written using the Kannada script. The other native languages of Karnataka, Tulu, Kodava Takk, Beary bashe and Konkani are also written using the Kannada script.

Kannada is attested epigraphically from the mid-1st millennium CE, and literary Old Kannada flourished in the 9th to 10th century Rashtrakuta Dynasty. Contemporary Kannada literature is the most successful in India, with India's highest literary honor, the Jnanpith awards, having been conferred seven times upon Kannada writers, which is the highest for any language in India. Based on the recommendations of the Committee of Linguistic Experts, appointed by the Ministry of Culture, the Government of India officially recognised Kannada as a classical language.

ಇಷ್ಟೆಲ್ಲಾ ಆದ್ರೂ ಬೆಂಗಳೂರಿನಲ್ಲಿ (ನಮ್ಮದೇ ಕರ್ನಾಟಕದ ರಾಜಧಾನಿ)ಕನ್ನಡ ಮಾತನಾಡುವರು ಅಲ್ಪಸಂಖ್ಯೆಯವರಾಗಿದ್ದಾರೆ .ಇದಕ್ಕೆಲ್ಲಾ ನಾವೇ ಕಾರಣ .ನಾವು ಬಹಳಷ್ಟು ಕನ್ನಡಿಗರು ಕನ್ನಡದಲ್ಲಿ ಮಾತನಾಡಿದರೆ ನಮಗೆ  ನಮ್ಮ prestige ಕಡಿಮೆ ಅಂತ ಬಾವಿಸುತ್ತಿರುವಂತಿದೆ .ನಾವು ಈ ಭ್ಭ್ರಾಂತಿಯಿಂದ ಹೊರಬರಬೇಕು .

ಇನ್ನು  ನಾವು ಕನ್ನಡ ಚಲನ ಚಿತ್ರಗಳನ್ನು ನೋಡುವುದು ಅಪರೂಪ .ಯಾಕೆ ಅಂದ್ರೆ ಬಹಳಷ್ಟು ಕನ್ನಡಿಗರ ಆರೋಪ :ಗುಣಮಟ್ಟ ಕಳಪೆ ಅಥವಾ ಉತ್ತಮ ಕಥೆ, ಸಂಗೀತ ,ಸಾಹಿತ್ಯ ಇಲ್ಲ ಅಂತ .ಇದಕ್ಕೆ ಸಂಭಂಧ ಪಟ್ಟವರು ಯೋಚಿಸಬೇಕು .ನಾವು ಬರೀ ಆರೋಪ ಮಾಡ್ತಾ ಇದಿವಿ .ಯಾಕೆ ಹೀಗೆ , ಏನು ಮಾಡಬಹುದು ಅನ್ನವುದರ ಕಡೆ ಗಮನವಿಲ್ಲ .ಇರುವ FM Radio ಚಾನೆಲ್ ಗಳಲ್ಲಿನ RJ ಗಳು  ಮಾತನಾಡುವ  ಕನ್ನಡ  ಆಂಗ್ಲ ಭಾಷೆ ಮಿಶ್ರಿತ .ಅವರಿಗೆ ಕನ್ನಡದ ಪಾಠ ಮಾಡುವ ಮೇಸ್ಟ್ರುಗಳ ಸಲಹೆ ಬೇಕು ಅನ್ಸುತ್ತೆ  .FM ರೈನ್ಬೌ ೧೦೧.೩ ಇದಕ್ಕೆ ಅಪವಾದ .ಇದೊಂದು ಸಮಾಧಾನದ ವಿಷಯ .ಇತ್ತೀಚೀನ ವರ್ಷಗಳಲ್ಲಿ ಹಲವರು ಕನ್ನಡ Channels ಬಂದಿರುವುದು ಭಾಷೆ ಉಳಿಯಲು - ಬೆಳೆಯಲು ಉಪಯೋಗ ಆಗುತ್ತಿದೆ .

ಇಂದು ನಾವು ಬೆಂಗಳೊರಿನಲ್ಲಿ ಬೇರೆ ರಾಜ್ಯದವರ ಮನೆಯಲ್ಲಿ ಬಾಡಿಗೆ ಇರಬೇಕಾದ ಪರಿಸ್ಥಿತಿ ಇದೆ .ಇನ್ನು site ತೆಗೆದು ಕೊಳ್ಳುವುದು ಬಹಳ ದೂರದ ಮಾತು ಆಯಿತು  ನಾವ್ಯಾಕೆ ನಮ್ಮವರನ್ನು ನಮ್ಮವರಿಗಾಗಿ ಸಹಾಯ ಮಾಡಲು ಮೀನ ಮೇಷ ಎಣಿಸುತ್ತಿದ್ದೇವೆ. ನಾವು ಅಸ್ಟೊಂದು   ಸ್ವಾರ್ಥಿ ಗಳಾಗಿ ಬಿಟ್ಟಿದ್ದೇವೆಯಾ ? ಅಥವಾ ನಮಗೆ ನಮ್ಮೆ ಭಾಷೆ , ನೆಲದ ಬಗ್ಗೆ ಗಮನವಿಲ್ವ ? ಅಕ್ಕ ಪಕ್ಕದ ರಾಜ್ಯದವರಿಂದ ಸ್ವಲ್ಪ ಭಾಷಾಭಿಮಾನ ಕಲಿಯೋಣ . ಕನ್ನಡಕ್ಕಾಗಿ ದುಡಿದವರು ಮಡಿದವರಿಗೆ ಲೆಕ್ಕವಿಲ್ಲ. ಅವರ ಕೊಡುಗೆ, ಸೇವೆಯನ್ನ ನೆನೆದು ನಮ್ಮ ಭಾಷೆ , ನೆಲವನ್ನು ಬೆಳೆಸೋಣ.

ಇನ್ನು ನಮ್ಮ ಕನ್ನಡಿಗರ -ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಂಘಗಳು ಯಾಕೆ ಬೇಕು ? ನಾವು ಕನ್ನಡದಲ್ಲಿ ಮಾತನಾಡಲು ಅಪ್ಪ.ಅಮ್ಮ ಅಣ್ಣ ಅಕ್ಕ, ಅತ್ತೆ ಮಾಮ , ಎನ್ನಲು  ಹಿಂಜರಿಕೆ ಯಾಕೆ ? ಇನ್ನು M.G.ರಸ್ತೆ , Brigade ರಸ್ತೆ , commercial ರಸ್ತೆ , ದೊಡ್ಡ ಶಾಪಿಂಗ್ ಮಾಲ್ ಗಳಲ್ಲಿ ಕನ್ನಡ ಮಾತನಾದುವರನ್ನು ಕಂಡರೆ ಓಹೋ ನಾವಿನ್ನು ಬೆಂಗಳೂರಿನಲ್ಲಿ ಇದಿವಿ ಅಂತ ಖಾಯಂ ಅನ್ನೋ ಪರಿಸ್ಥಿತಿ ನಿರ್ಮಾಣ  ಮಾಡಿಕೊಂಡಿದ್ದೇವೆ .

 ಇನ್ನು ಬಂದು ಹೋಗಿರುವ -ಇರುವ ಸರ್ಕಾರಗಳಿಗೆ ಕನ್ನಡ ವನ್ನು ಆಡಳಿತದಲ್ಲಿ ಬಳಸಲು ಅದ್ಯಾವ ಗರ ಬಡಿದಿದೆಯೂ ಗೊತ್ತಿಲ್ಲ , ಅದೇನು ಕಷ್ಟ ? ಕನ್ನಡದಲ್ಲಿ ಹುಟ್ಟಿ ಬೆಳೆದ ಜನರಗೆ ಬೆಲೆ  ಇಲ್ಲವ .ಬೇರೆ ರಾಜ್ಯದಲ್ಲಿ  ಈ ಸ್ಥಿತಿ ಇಲ್ವಲ್ಲ .ನಮ್ಮ ರಾಜ್ಯ ದಲ್ಲಿ  ವಿದ್ಯೆಯನ್ನು ಕಲಿತವರಿಗೇನು ಕೊರತೆ ಇಲ್ಲ , ಬುದ್ಧಿ ವoತರೂ ಇದ್ದಾರೆ .ಹೀಗಿದ್ದಾಗ ಸಮಸ್ಯೆ ನಮ್ಮ ಕನ್ನಡವನ್ನು ಬೆಳೆಸುವ -ಉಳಿಸುವ , ಕನ್ನಡಿಗರಿಗೆ ಒಬ್ಬರೊನ್ನಬರಿಗೆ ಸಹಾಯ ಮಾಡುವ  ಇಚ್ಚಾ ಶಕ್ತಿಯ ಕೊರತೆ ಇರುವದರಲ್ಲಿ ಅನುಮಾನವಿಲ್ಲ.

ಬನ್ನಿ ಇನ್ನಾದರೂ ಎಚ್ಚೆತ್ತು ಕೊಳ್ಳೋಣ . ಇಲ್ಲ ವಾದಲ್ಲಿ ಮುಂದೆ ಒಂದು ದಿನ ನಮ್ಮ ಕನ್ನಡ ನಾಡಿನಲ್ಲಿ ಸಾಮಾನ್ಯ ಜನ  ಜೀವಿಸಲು ಕಷ್ಟ ವಾದೀತು

ನಮ್ಮ ಕನ್ನಡದ-ಕರ್ನಾಟಕ ದ ಬಗೆಗಿನ ಕೆಲವು ಉತ್ತಮ ವಾದ ವೀಡಿಯೊ ಗಳನ್ನು ನೋಡೋಣ ಬನ್ನಿ :

http://www.youtube.com/watch?v=dBo1tB4q1go

http://www.youtube.com/watch?v=3GmTQg49UqM

http://www.youtube.com/watch?v=dtVT2-IhlPg

ಜೈ ಕರ್ನಾಟಕ ಮಾತೆ , ಸಿರಿಗನ್ನಡಂ ಗೆಲ್ಗೆ  ಸಿರಿಗನ್ನಡಂ ಬಾಳ್ವೆ
---------------------------------------------

2 comments:

nanditha tm said...

good thinking... i feel the paintings of historical places of karnataka on walls on road sides is a good project.I really appreciate it.

Jnaneshwara said...

Thanks Nandita. Good observation.Yes I agree, good work from government by painting the historical and tourism places of karnataka on walls on road side.This will not only give the information about the places of karnataka,but also it gives a feeling for us that we live in such a wonderful place:Karnataka.We are lucky to be born and brought up here in this state.