Tuesday, October 09, 2012

Bhavageethegalu (ಭಾವಗೀತೆಗಳು)

ಚಿಕ್ಕಂದಿನಿಂದ ನನಗೆ ಸಾಹಿತ್ಯದಲ್ಲೂ ಒಲವು ಹೆಚ್ಚು. ನನ್ನ ತಾಯಿ ಹೆಚ್ಚು ಓದದಿದ್ದರೂ ದಿನಕ್ಕೊಂದು ಕಾದಂಬರಿ ಓದಿ ಮುಗಿಸುತಿದ್ದರು.! ಕಥೆ, ಕಾದಂಬರಿ, ಹಾಡುಗಳು ಅಂದ್ರೆ ಅಮ್ಮನಿಗ ಪಂಚ ಪ್ರಾಣ.  ತಂದೆ  ವೃತ್ತಿಯಲ್ಲಿ ವೈದ್ಯರಾದರೂ ಒಳ್ಳೆ ಜನಪದ ಹಾಡುಗರ ಅಂಥ ಅಮ್ಮ ಆಗಾಗ ಹೇಳುತ್ತಿದರು. ನಾನು ಸಣ್ಣವನಿದ್ದಾಗ ಈ TV ನಮ್ಮ ಊರಲ್ಲಿ ಇನ್ನೂ ಕಾಲು ಇಡದೆ ಇದ್ದ ಆ ಸಂದರ್ಭದಲ್ಲಿ , ಸಾಹಿತ್ಯ , ನಾಟಕ, ಸಂಗೀತ ಕಾರ್ಯಕ್ರಮಗಳು ನನ್ನನ್ನು ಆಕರ್ಷಿಸಿದವು. ನನ್ನ ತಂದೆ ನನ್ನ ಹುಟ್ಟ ಊರು ಶಿವಮೊಗ್ಗದ  ಆಗಿನ ಪ್ರಖ್ಯಾತ ಕರ್ನಾಟಕ ಸಂಘಕ್ಕೆ ಸಂಗೀತ, ಸಾಹಿತ್ಯ ಕಾರ್ಯಕ್ರಮಕ್ಕೆ ಕರೆದೊಯುತ್ತಿದರು.

ನಾನು ಬೆಳೆದಂತೆ ಕನ್ನಡ ಸಾಹಿತಯದತ್ತ ಒಲವು ಬೆಳೆಸಿಕೊಳ್ಳುತ್ತ ಬಂದೆ. ಶಿವಮೊಗ್ಗಾ ಮಣ್ಣೇ  ಸಾಹಿತ್ಯಕ್ಕೆ , ಸಾಹಿತಿಗಳಿಗೆ, ಕವಿಗಳಿಗೆ, ಕಲಾವಿದರಿಗೆ  ಹೇಳಿ ಮಾಡಿಸಿದಂತೆ ಇದೆ.  

ನನ್ನ ಕೆಲವು ಹವ್ಯಾಸಗಳಲ್ಲಿ  ಒಂದಾದ ಬರವಣಿಗೆಯ ಜೊತೆ ಉತ್ತಮ ಹಾಡುಗಳನ್ನು ಕೇಳುವ ಚಟ ಬಹಳ ಹಿಂದಿನಿಂದ ಇದೆ .

ಭಾವಗೀತೆ  (http://en.wikipedia.org/wiki/Bhavageete ಈ ಪ್ರಕಾರಗಳಲ್ಲಿ  ಒಂದು. ನನ್ನ ಫೇವರಿಟ್ ಅನ್ನುವ ಕೆಲವು ಭಾವಗೀತೆಗಳು ಈ ಕೆಳಕಂಡಂತೆ  ಇವೆ. But list never ends.........: ಕನ್ನಡ ಮಣ್ಣಿಗೆ, ಸಾಹಿತಿಗಳಿಗೆ , ಕಲಾವಿದರಿಗೆ, ಗಾಯಕರಿಗೆ,ಸಂಗೀತಗಾರರಿಗೆ , ಅಭಿಮಾನಿಗಳಿಗೆ, ಪ್ರೋತ್ಸಾಹ ಕೊಡುವ ಕೊಡುಗೈ ದಾನಿಗಳಿಗೆ , ................. ........... ನಮೋ ನಮಃ .  ಕನ್ನಡ ಬೆಳೆಯಲಿ, ಉಳಿಯಲಿ,  ಮೊಳಗಲಿ .. ಜೈ ಕನ್ನಡಾಂಬೆ 

2 comments:

Niveditha said...

Thanks for taking through the memory lane. Nice collection.

jnaneshwara Tegginamatha said...

Thank you, Nive..Dhanyavaadagalu