Friday, January 22, 2010

Chindodi Leela - Kalaarasikara managedda Ranganayaki




ವೃತ್ತಿ  ರಂಗಭೂಮಿಯನ್ನೇ  ಉಸಿರಾಗಿಸಿಕೊಂಡಿದ್ದ  ಕನ್ನಡದ ಹಿರಿಯ  ರಂಗ ಭೂಮಿ  ಹಾಗೂ ಚಿತ್ರರಂಗ  ಕಲಾವಿದೆ  ಹಾಗೂ  ಚಿಂದೋಡಿ  ಲೀಲ  [೭೨ -72 ವರ್ಷ ]  ನಮ್ಮನ್ನಗಲಿದ್ದಾರೆ  .

ಅಭಿನವ ಸಾಮ್ರಾಜ್ಞಿ(1970),ಪದ್ಮಶ್ರೀ (1988),Dr.ಗುಬ್ಬಿ  ವೀರಣ್ಣ (2002) ,ಕೇಂದ್ರ  ನಾಟಕ  ಮತ್ತು  ಸಂಗೀತ  ನಾಟಕ  ಪ್ರಶಸ್ತಿ (2004) ಮುಂತಾದವುಗಳಿಗೆ  ಪಾತ್ರರಾಗಿದ್ದರು .

ಆವ್ರು  "ಗುಣಸಾಗರಿ ,"ಮುದುಕನ  ಮದುವೆ ","ಪೊಲೀಸನ  ಮಗಳು (Guiness Record ) " ಮುಂತಾದ  ನಾಟಕಗಳಿಂದ ಮನೆ   ಮಾತಾಗಿದ್ದರು .

30 ಕ್ಕೂ  ಹೆಚ್ಚು  ಚಲನ ಚ್ತಿತ್ರಗಳಲ್ಲೂ  ಅಭಿನಯಿಸಿದ್ದರು .ಅವುಗಳಲ್ಲಿ  ಪ್ರಬುಲಿಂಗ ಲೀಲೆ    ,ಕಿತ್ತೂರು  ಚೆನ್ನಮ್ಮ ,ಗಾಳಿ  ಗೋಪುರ ,ಭಲೇ  ಹುಡುಗ ,ಕೃಷ್ಣದೇವರಾಯ  ,ಶರಪಂಜರ ,ಮುಕ್ತಿ ,ಕುಮಾರ  ರಾಮ ,ರೈತನ ಮಕ್ಕಳು  ,ತೇಜಸ್ವಿನಿ ,ನವಜೀವನ  ಮುಖ್ಯವಾದದ್ದು .

1950 ರಲ್ಲಿ  5 ವರ್ಷದ  ಬಾಲಕಿಯಗಿದ್ದಾಗ  "ಶಿವಯೋಗಿ  ಸಿದ್ದರಾಮೇಶ್ವರ " ನಾಟಕದಲ್ಲಿ  ಬಾಲಸಿದ್ದ ರಾಮೇಶ್ವರನ ಪಾತ್ರದಲ್ಲಿ  ರಂಗ  ಪ್ರವೇಶ  ಮಾಡಿದರು . ೨(2)   ತರಗತಿಯ ವರೆಗೆ  ಓದಿದ್ದ  ,ಅವರ  ಸಾಧನೆ  ಅವರನ್ನು  ನಾಟಕ  ಅಕಾಡೆಮಿ  ಅಧ್ಯಕ್ಷ  ರನ್ನಾಗಿ   ಮಾಡಿತು .ಕಂಪನಿ  ನಾಟಕಗಳಿಗೆ   ಸಬ್ಸಿಡಿ   ನೆರವು ,ಮಾಸಾಶನ , ನಾಟಕ  ಪ್ರದರ್ಶನಕ್ಕೆ ಅಡ್ಡಿಯಾಗಿದ್ದ  ಪರವಾನಿಗೆಗೆ ಏಕ  ಗವಾಕ್ಷಿ  ಪದ್ಧತಿ  ಜಾರಿಗೊಳಿಸಿದ್ದು   ಎಲ್ಲರನ್ನು  ಬೆರಗು  ಮಾಡುವಂತೆ  ಮಾಡಿತ್ತು


ದೆಹಲಿ ,ಹೈದರಾಬಾದ್ ,ಕೇರಳ ,ಮಹಾರಾಷ್ಟ್ರ ,ವಾರಣಾಸಿ  ಅಲ್ಲದೆ  ಅಮೆರಿಕ ,ಇಂಗ್ಲೆಂಡ್ನಲ್ಲೂ  ನಾಟಕ  ಪ್ರದರ್ಶನಗಳ  ಮೂಲಕ  KBR Drama  comapny ಹೆಸರನ್ನು  ಚಿರ ಸ್ಥಯಿಯಗಿಸಿದರು    .ಅವರ  ಮನೆಯ  ಹಿರಿ ,ಕಿರಿಸದಸ್ಯರನ್ನೆಲ್ಲ  ಲೆಕ್ಕ  ಹಾಕಿದರೆ  25 ಕ್ಕೂ  ಅಧಿಕ  ಕಲಾವಿದರು  ಸಿಗುತ್ತಾರೆ .

ಕಲಾವಿದರ  ಬದುಕು ,ಬವಣೆ  ಅರಿತ್ತಿದ್ದ  ಚಿಂದೋಡಿ ಲೀಲ ಕಲಾವಿದರ  ಮೇಲೆ  ವಿಶೇಷ  ಪ್ರೀತಿ   ಹೊಂದಿದ್ದರು .ಅವರನ್ನು  ಗೌರವಿಸುತ್ತಿದ್ದರು .

ತವರು  ದಾವಣಗೆರೆ  ಹಾಗೂ  ಅತಿಯಾಗಿ  ಪ್ರೀತಿಸುತ್ತಿದ್ದ  ಚಿಂದೋಡಿ  ಮನೆತನ  ಹೆಸರಲ್ಲಿ  ರಂಗಮಂದಿರ  ಸ್ಥಾಪಿಸಿದ್ದರು   .

1994 ರಲ್ಲಿ  ನಮ್ಮ  ಊರಾದ  ಶಿವಮೊಗ್ಗದಲ್ಲಿ  ನಾಟಕ  ಪ್ರದರ್ಶನವಿದ್ದಾಗ  ಬಂದಾಗ  ಅವರನ್ನು  ಭೇಟಿಯಾಗಿದ್ದೆ  ಮತ್ತು  ಅವರಿಂದ  ಹಸ್ತಾಕ್ಷರವನ್ನು ತೆಗೆದು ಕೊಡಿದ್ದೆ   .






ಇಂದು  ಅವರ  ಅಂತಿಮ  ದರ್ಶವನ್ನು  ಪಡೆಯಲು  ಹೋದಾಗ  ಅವರನ್ನು   ನೋಡಿದಾಗ  ಅವರು  ಇನ್ನೊಂದು  ನಾಟಕಕ್ಕಾಗಿ  ತಯಾರಾಗಿ  ಮಲಗಿದವರಂತೆ  ಗೋಚರಿಸಿದರು   http://www.youtube.com/watch?v=dUS8uChmbIA .

ಅವರ  ಆತ್ಮಕ್ಕೆ  ಭಗವಂತ  ಶಾಂತಿ  ನೀಡಲಿ  ಮತ್ತು  ನಮ್ಮ  ನಾಟಕ  ರಂಗಕ್ಕೆ  ಅವರು  ನೀಡಿದ  ಮಾರ್ಗದರ್ಶನ ,ಪ್ರೋತ್ಸಾಹ  ನಮ್ಮ  ಪೀಳಿಗೆಯವರಿಗೆ   ಮಾರ್ಗದರ್ಶನ  ವಾಗಲಿ .

2 comments:

nanditha tm said...

oh good that you met her.

Jnaneshwara said...

Yes Nandu , As a women itself she had achieved so much that its difficult to imagine.Long live Chindodi mam,