Wednesday, March 17, 2010

A Trip to Siddhara betta

On March 7th I had been to Siddhara betta(hill) Trip (trekking).        I Visited siddhara betta along with my close friends and old room mates. We have been friends since 2001.Now most of us are married. Remaining couple of bachelors are following our foot steps and will join married's club shortly .!

Siddhara betta(Hill) is near Tumkur .Its around 3 hours journey from Bangalore.

Some more information about Siddhara betta :

It is Sacred Place where 9000 siddaru(Holy spritual men) made  meditation and worship of Lord Shiva, They got Mooksha(Freedom)  from this Eternal world .Here is famous temple suituated at the  Top of the Hill. It is very difficult to Climb this rock Cultured beautiful temple.

A rocky hill with temple and caves at the top are the attractions here. Though the major crowd which visits is the one of pilgrims. This place also interests trekkers and other nature lovers. Cave exploration is a enjoyable experience.







Monday, February 22, 2010

Kannadada Kelavu prasiddha Vyaktigalu ಕನ್ನಡದ ಕೆಲವು ಪ್ರಸಿದ್ಧ ವ್ಯಕ್ತಿಗಳು


ನನಗೆ  ಕಾಲೇಜ್ ನಲ್ಲಿ PU ಓದುತ್ತಿದ್ದ ದಿನಗಳಿಂದ  ಸಾಹಿತಿಗಳನ್ನು , ಪ್ರಸಿದ್ಧ ವ್ಯಕ್ತಿಗಳನ್ನು ಭೇಟಿಮಾಡುವ ,ಬರವಣಿಗೆಯಲ್ಲಿ ತೊಡಗಿಕೊಳ್ಳುವ , ಪದ್ಯ, ಲೇಖನಗಳನ್ನು ಬರೆದು ಪತ್ರಿಕೆ ಗಳಿಗೆ ಪ್ರಕಟಿಸುವ ಹವ್ಯಾಸ ಶುರು ಆಯಿತು .ಅವರಲ್ಲಿ ಹಲವಾರು ಸಾಹಿತಿಗಳನ್ನು , ಕನ್ನಡದ  ಪ್ರಸಿದ್ಧ ಸಾಹಿತಿಗಳನ್ನು , ವ್ಯಕ್ತಿಗಳನ್ನು ನನ್ನ ಊರಾದ ಶಿವಮೊಗ್ಗ (ಮಲೆನಾಡಿನ ಹೆಬ್ಬಾಗಿಲು ) ದಲ್ಲಿ ಭೇಟಿ ಮಾಡುವ ಅವಕಾಶ ದೊರಕಿ ಅವರಿಂದ ಹಸ್ತಾಕ್ಷರ ಪಡೆಯುತ್ತಿದ್ದೆ .

When I was in my native Shivamogga ,I had a hobby of writing articles,taking autographs from famous personalities,publishing my poems and articles in local news papers.I am lucky to get autographs from these famous personalites of karnataka

.ಡಾ.ಎಂ. ಚಿದಾನಂದಮೂರ್ತಿ (Dr.M.Chidananda Murthy)




ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ. ಇವರ "ಹೊಸತು
 ಹೊಸತು" ಎಂಬ ಕೃತಿಗೆ ೧೯೯೭ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಚಿದಾನಂದಮೂರ್ತಿಯವರು ಶಿವಮೊಗ್ಗ ಜಿಲ್ಲೆಯ ಹಿರೋಕೋಗಲೂರು ಎಂಬ ಗ್ರಾಮದಲ್ಲಿ ೧೯೩೧ರ ಮೇ ೧೦ ರಂದು ಜನಿಸಿದರು. ಎಮ್.ಎ. ಪದವಿ ಹಾಗು ಪಿ.ಎಚ್.ಡಿ ಪದವಿಗಳನ್ನು ಸಂಪಾದಿಸಿ ಮೊದಲು ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕ ವೃತ್ತಿ ಹಿಡಿದವರು.

ನಂತರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದು ಸ್ವಇಚ್ಛೆಯಿಂದ ನಿವೃತ್ತರಾದರು. ಕೆಲ ಕಾಲ ಅಮೆರಿಕದ ಚಿಕಾಗೊ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದರು.

ಚಿದಾನಂದಮೂರ್ತಿಯವರು ಅನೇಕ ಸಂಶೋಧನಾ ಗ್ರಂಥಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕೆಲವು ಇಂತಿವೆ: ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಶೂನ್ಯಸಂಪಾದನೆಯನ್ನು ಕುರಿತು, ಭಾಷಾವಿಜ್ಞಾನದ ಮೂಲತತ್ವಗಳು, ಸಂಶೋಧನ ತರಂಗ, ಕನ್ನಡ ಸಂಸ್ಕೃತಿ-ನಮ್ಮ ಹೆಮ್ಮೆ, ಪೂರ್ಣ ಸೂರ್ಯಗ್ರಹಣ, ವೀರಗಲ್ಲುಗಳು ಮತ್ತು ಮಾಸ್ತಿಕಲ್ಲುಗಳು, ಗ್ರಾಮೀಣ. "ಕನ್ನಡ ಸಂಸ್ಕೃತಿ-ನಮ್ಮ ಹೆಮ್ಮೆ" ಈ ಗ್ರಂಥವು ಒಂಬತ್ತು ಭಾಷೆಗಳಿಗೆ ಅನುವಾದವಾಗಿದೆ.

ಚಿದಾನಂದಮೂರ್ತಿಯವರು ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ಹಾಗು ಇನ್ನೂರೈವತ್ತಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಇವರ ಆರು ಕೃತಿಗಳು ಬಹುಮಾನಿತವಾಗಿವೆ. ಐವತ್ತಕ್ಕು ಹೆಚ್ಚು ರಾಷ್ಟ್ರೀಯ ಹಾಗು ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ, ವಿಚಾರಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಕನ್ನಡ ನಿಘಂಟು ಸಂಪಾದಕ ಸಮಿತಿಯ ಸದಸ್ಯರಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ. ಕನ್ನಡ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದ ಚಳುವಳಿ ಅಥವಾ ವಿಷಯಗಳಲ್ಲಿ ಹೋರಾಟಕ್ಕಿಳಿದಿದ್ದಾರೆ ಹಾಗು ತಮ್ಮ ಅಭಿಪ್ರಾಯಗಳನ್ನು ನಿರ್ದಾಕ್ಷಿಣ್ಯವಾಗಿ ನೀಡುತ್ತಿರುತ್ತಾರೆ.


.  ಕೆ.ವಿ.ಸುಬ್ಬಣ್ಣ (K.V.Subbanna) :






ಕೆ.ವಿ.ಸುಬ್ಬಣ್ಣನವರ ಹುಟ್ಟೂರು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೆಗ್ಗೋಡು. ೧೯೩೨ ಫೆಬ್ರವರಿ ೨೦ ರಂದು ಜನಿಸಿದ ಇವರು ಮುಂದೆ ಹೆಗ್ಗೋಡಿನಂತಹ ಚಿಕ್ಕ ಊರಿನಲ್ಲಿದ್ದುಕೊಂಡೇ ನೀಲಕಂಠೇಶ್ವರ ನಾಟ್ಯಸೇವಾ ಸಂಘ (ನೀನಾಸಂ) ರಂಗ ಚಟುವಟಿಕೆಗಳ ಮೂಲಕ ಅಂತಾರಾಷ್ಟ್ರೀಯ ಗಮನ ಸೆಳೆದರು. ಈ ಮೂಲಕ ಗ್ರಾಮೀಣ ರಂಗಭೂಮಿಗೆ ತನ್ನದೇ ಆದ ಸ್ಥಾನ, ಪ್ರತಿಷ್ಠೆಗಳನ್ನು ತಂದುಕೊಟ್ಟರು. ನೀನಾಸಂ ಸಂಸ್ಥೆ ನಡೆಸುವ ತಿರುಗಾಟ ಇಂದು ಕನ್ನಡ ರಂಗಭೂಮಿಯ ಒಂದು ಅವಿಭಾಜ್ಯ ಅಂಗವಾಗಿದೆ. ಸಾಹಿತಿಯೂ ಆಗಿದ್ದ ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ೨೦೦೫ ಜುಲೈ ೧೬ ರಂದು ಹೃದಯಾಘಾತದಿಂದ ನಿಧನರಾದರು. ಅಕ್ಷರ ಪ್ರಕಾಶನವನ್ನು ಕೆ.ವಿ.ಸುಬ್ಬಣ್ಣನವರು ಹೆಗ್ಗೋಡುವಿನಲ್ಲಿ ಸ್ಥಾಪಿಸಿದರು.


೩ . ದೊಡ್ಡರಂಗೇಗೌಡ (Doddarange Gowda)




ದೊಡ್ಡರಂಗೇಗೌಡ - ಕನ್ನಡದ ಕವಿಗಳಲ್ಲೊಬ್ಬರು ಮತ್ತು ಚಿತ್ರಸಾಹಿತಿಗಳಲ್ಲೊಬ್ಬರು.

ತುಮಕೂರು ಜಿಲ್ಲೆಯ ಕುರುಬರಹಳ್ಳಿಯಲ್ಲಿ ೧೯೪೫ರಲ್ಲಿ ಜನಿಸಿದರು.


ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ಇವರು, ನಂತರ ಕನ್ನಡದಲ್ಲಿ ನವೋದಯ ಸಾಹಿತ್ಯದ ಬಗ್ಗೆ ಸಂಶೋಧನೆ ನಡೆಸಿದರು. ಇವರ ಈ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಪಿಹೆಚ್‍ಡಿ(ಡಾಕ್ಟರೇಟ್) ಪದವಿ ದೊರಕಿತು.
ದೊಡ್ಡರಂಗೇಗೌಡ ಗೀತಸಾಹಿತ್ಯ ಒದಗಿಸಿರುವ ಕೆಲವು ಚಲನಚಿತ್ರಗಳು

   * ರಂಗನಾಯಕಿ ,ಪರಸಂಗದ ಗೆಂಡೆತಿಮ್ಮ,ಆಲೆಮನೆ ,ಅನುಪಮ ,ಅರುಣರಾಗ , ಮುದುಡಿದ ತಾವರೆ ಅರಳಿತು , ಏಳು ಸುತ್ತಿನ ಕೋಟೆ ,ಅಶ್ವಮೇಧ ,ದಯಗೀತೆ
    * ಭೂಲೋಕದಲ್ಲಿ ಯಮರಾಜ ,ಜನುಮದ ಜೋಡಿ ,ಕುರುಬನ ರಾಣಿ ,ರಮ್ಯ ಚೈತ್ರಕಾಲ,ತಂದೆಗೆ ತಕ್ಕ ಮಗ,

ದೊಡ್ಡರಂಗೇಗೌಡ ಗೀತಸಾಹಿತ್ಯ ಒದಗಿಸಿರುವ ಕೆಲವು ಭಾವಗೀತೆ ಆಲ್ಬಂಗಳು
    * ಮಾವು-ಬೇವು , ಭೂಮಿ-ಬಾನು , ಪ್ರಾಯ ಮೂಡಿತು

೧೯೭೨ರಿಂದ ೨೦೦೪ರವರೆಗೂ ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆ ಬಳಿ ಇರುವ ಎಸ್.ಎಲ್.ಎನ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ.


೪. ಬಿ.ಕೆ.ಸುಮಿತ್ರಾ (B.K.Sumitra)





ಕನ್ನಡ ಚಿತ್ರರಂಗದ ಪ್ರಮುಖ ಹಿನ್ನೆಲೆ ಗಾಯಕಿಯರಲ್ಲಿ ಬಿ.ಕೆ.ಸುಮಿತ್ರಾ ಒಬ್ಬರು.ಸಂಗೀತದ ಎಲ್ಲ ಪ್ರಕಾರಗಳಲ್ಲೂ ಹಾಡಿರುವ ಹೆಗ್ಗಳಿಕೆ ಇವರದು.ಬಿ.ಕೆ.ಸುಮಿತ್ರಾ ಹುಟ್ಟಿದ್ದು ಜುಲೈ ೧,೧೯೪೬ ರಂದು ಚಿಕ್ಕಮಗಳೂರು ಜಿಲ್ಲೆಯ ಬಿಳಿಲುಕೊಪ್ಪ ಗ್ರಾಮದಲ್ಲಿ.ತಂದೆ ಪಟೇಲ್ ಕೃಷ್ಣಯ್ಯ,ತಾಯಿ ಗಂಗಮ್ಮ.ಓದಿದ್ದು ಬಿಎಸ್‌ಸಿ,ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ.ಕಾಲೇಜಿನಲ್ಲಿ ಓದುತ್ತಿದ್ದಾಗ ರೇಡಿಯೋದಲ್ಲಿ ಬರುತ್ತಿದ್ದ ಗೀತೆಗಳನ್ನು ಕೇಳಿ ಸಂಗೀತಾಭ್ಯಾಸ ಶುರು.ಜಾನಪದಗೀತೆ,ಭಕ್ತಿಗೀತೆ,ಭಾವಗೀತೆ ಮೊದಲಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.ಮುಂದಿನ ದಿನಗಳಲ್ಲಿ ಕುವೆಂಪು,ದ.ರಾ.ಬೇಂದ್ರೆ,ಜಿ.ಎಸ್.ಶಿವರುದ್ರಪ್ಪ...ಮೊದಲಾದ ಕವಿಗಳ ಕವಿತೆಗಳನ್ನು ಆಕಾಶವಾಣಿ,ದೂರದರ್ಶನ,ಧ್ವನಿಸುರುಳಿ,ಸಿ.ಡಿ.ಗಳಿಗಾಗಿ ಹಾಡಿದರು.ದೇಶ-ವಿದೇಶಗಳಲ್ಲಿ ಅನೇಕ ಕನ್ನಡಕೂಟಗಳಿಗಾಗಿ ಸುಗಮ ಸಂಗೀತ ಕಾರ್ಯಕ್ರಮ ನಡೆಸಿ ಕೊಟ್ಟಿದ್ದಾರೆ.

ಜಿ.ಕೆ.ವೆಂಕಟೇಶ್‌ ರವರ ಸಂಗೀತ ನಿರ್ದೇಶನದ ಕವಲೆರಡು ಕುಲವೊಂದು ಚಿತ್ರದಿಂದ ಗಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದರು.ಹೆಚ್.ಎಂ.ವಿ.,ಸಿ.ಬಿ.ಎಸ್.,ಸಂಗೀತ.,ಲಹರಿ ಮುಂತಾದ ಧ್ವನಿಸುರುಳಿ ಸಂಸ್ಥೆಗಳಿಗೆ ಹಾಡಿದ್ದಾರೆ.ಉದುಪಿಯ ಕೃಷ್ಣ,ಧರ್ಮಸ್ಥಳದ ಮಂಜುನಾಥ,ಎಡೆಯೂರು ಸಿದ್ಧಲಿಂಗೇಶ್ವರ..ಮುಂತಾದ ಭಕ್ತಿಗೀತೆಗಳನ್ನು ಹಾಡಿದ್ದಾರೆ.ಪತಿ ಸುಧಾಕರ್.ಮಗಳು ಸೌಮ್ಯ ಖ್ಯಾತ ಬಾಲಿವುಡ್ ಗಾಯಕಿ.ಮಗ ಸುನೀಲ್‌ರಾವ್ ಕನ್ನಡದ ಉದಯೋನ್ಮುಖ ಚಿತ್ರನಟ.

    * ಲಾವಣ್ಯ ಲೇಖಕರ ಬಳಗದಿಂದ ಗಾನಕೋಗಿಲೆ ಪ್ರಶಸ್ತಿ.
    * ಕೆಂಪೇಗೌಡ ಪ್ರಶಸ್ತಿ.
    * ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ.
    * ರಾಜ್ಯೋತ್ಸವ ಪ್ರಶಸ್ತಿ.

೫.ಮೈಸೂರು ಅನಂತಸ್ವಾಮಿ  (Mysore Anantaswamy) :






ಅನಂತಸ್ವಾಮಿ ಹುಟ್ಟಿದ್ದು ಪ್ರಸಿದ್ಧ ಸಂಗೀತಗಾರ ಚಿಕ್ಕ ರಾಮರಾವ್ರವರ ಮನೆತನದಲ್ಲಿ, ಮೈಸೂರಿನಲ್ಲಿ.ತಂದೆ ಸುಬ್ಬರಾಯರು,ತಾಯಿ ಕಮಲಮ್ಮ.ಬಾಲ್ಯದಿಂದಲೇ ಸುಗಮ ಸಂಗೀತದಲ್ಲಿ ಅಪಾರ ಆಸಕ್ತಿ.ಆ ಕಾಲದ ಜನಪ್ರಿಯ ಜಾನಪದ ಸಂಗೀತ ಹಾಡುಗಾರ ಪಿ.ಕಾಳಿಂಗರಾವ್‌ರವರ ಕಂಪೆನಿಯಲ್ಲಿ ಕೆಲಕಾಲ ಮ್ಯಾಂಡೋಲಿನ್ ವಾದಕರಾಗಿದ್ದರು.ಅಲ್ಲಿಂದ ಸುಗಮ ಸಂಗೀತ ಕ್ಷೇತ್ರಕ್ಕೆ ಕಾಲಿರಿಸಿದ ಇವರು ಮತ್ತೆ ಹಿಂದೆ ತಿರುಗಿ ನೋಡಲಿಲ್ಲ.ಅನೇಕ ಪ್ರಸಿದ್ಧ ಸಂಗೀತ ನಿರ್ದೇಶಕರೊಂದಿಗೆ ಸಂಗೀತ ಸಂಯೋಜಕರಾಗಿ ಕೆಲಸ ಮಾಡಿದರು.ನಂತರದಲ್ಲಿ ತಾವೇ ಸಂಗೀತ ಸಂಯೋಜನೆ ಮಾಡಿದರು.ಕನ್ನಡದ ಪ್ರಸಿದ್ಧ ಕವಿಗಳ ಕವನಗಳಿಗೆ ಧ್ವನಿಯಾದರು.ಕನ್ನಡ ಕವಿಗಳ ಭಾವಗೀತೆಗಳನ್ನು ಜನಪ್ರಿಯಗೊಳಿಸಲು ತಮ್ಮನ್ನು ತಾವೇ ಮುಡಿಪಾಗಿರಿಸಿಕೊಂಡರು.ಈ ಕವನಗಳನ್ನು ಧ್ವನಿಸುರುಳಿಗಳ ಮೂಲಕ ಕನ್ನಡಿಗರ ಮನೆ-ಮನಗಳಿಗೂ ತಲುಪಿಸಿ,ಆ ಮೂಲಕ ಹೊಸಯುಗಕ್ಕೆ ನಾಂದಿ ಹಾಡಿದರು.ಇವರು ಸಂಯೋಜನೆ ಮಾಡಿರುವ ರಾಗಗಳು ಆಯಾ ಗೀತೆಗಳ ಭಾವಕ್ಕೆ ತಕ್ಕಂತೆ ಸೂಕ್ತವಾಗಿದ್ದು ,ಅವುಗಳ ಅರ್ಥಗಳನ್ನು ಹೆಚ್ಚು ಸಮರ್ಥವಾಗಿ ಹೊರಚೆಲ್ಲುತ್ತವೆ. ಇವರ ಸಂಗೀತ ನಿರ್ದೇಶನ ಮತ್ತು ಗಾಯನದ ಸುಮಾರು ೨೬ ಧ್ವನಿಸುರುಳಿಗಳು ಬಿಡುಗಡೆಯಾಗಿವೆ.



೬ . ಸು.ರಂ. ಎಕ್ಕುಂಡಿ (S.R.Lakkundi)





ಕನ್ನಡದ ಖ್ಯಾತ ಕವಿ ಮತ್ತು ಸಾಹಿತಿ.

ಇವರ ಪೂರ್ಣ ಹೆಸರು ಸುಬ್ಬಣ್ಣ ರಂಗಣ್ಣ ಎಕ್ಕುಂಡಿ. ಇವರು ಹುಟ್ಟಿದ್ದು ೧೯೨೩ ಜನವರಿ ೨೦ರಂದು, ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ. ೧೯೪೪ರಲ್ಲಿ ಬಿ.ಎ.(ಆನರ್ಸ್) ಪದವಿ ಪಡೆದ ಎಕ್ಕುಂಡಿಯವರು ಉತ್ತರ ಕನ್ನಡ ಜಿಲ್ಲೆಯ ಬಂಕಿಕೊಡ್ಲದಲ್ಲಿ ಪ್ರೌಢಶಾಲೆಯ ಅಧ್ಯಾಪಕರಾದರು. ೩೫ ವರ್ಷಗಳ ಸೇವೆಯ ನಂತರ ಅಲ್ಲಿಯೆ ಮುಖ್ಯಾಧ್ಯಾಪಕರಾದರು.

ಪುರಸ್ಕಾರ

"ಲೆನಿನ್ನರ ನೆನಪಿಗೆ" ಎನ್ನುವ ಕೃತಿಗೆ ೧೯೭೦ರಲ್ಲಿ ಸೋವಿಯತ್ ಲ್ಯಾಂಡಿನ ನೆಹರು ಪುರಸ್ಕಾರ ದೊರೆತಿದೆ.
"ಮತ್ಸ್ಯಗಂಧಿ" ಕವನ ಸಂಕಲನಕ್ಕೆ ೧೯೭೫ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿದೆ.
"ಬೆಳ್ಳಕ್ಕಿಗಳು" ಹಸ್ತಪ್ರತಿಗೆ ೧೯೮೨ರಲ್ಲಿ ಮುದ್ದಣ ಸ್ಮಾರಕ ಕಾವ್ಯ ಬಹುಮಾನ ದೊರೆತಿದೆ.
"ಬಕುಲದ ಹೂವುಗಳು" ಎಂಬ ಕೃತಿಗೆ ೧೯೯೨ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.


 ೬ . ಬಿ.ಸಿ.ರಾಮಚಂದ್ರ ಶರ್ಮ (B.C.Ramachandra sharma)






ಬಿ.ಸಿ.ರಾಮಚಂದ್ರ ಶರ್ಮ - ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ. ಇವರು ೧೯೨೫ ನವಂಬರ೨೮ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಬೋಗಾದಿ ಚಂದ್ರಶೇಖರಶರ್ಮ.

 ಬೆಂಗಳೂರು ಮತ್ತು ಮೈಸೂರು‍ಗಳಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ಲಂಡನ್ ವಿಶ್ವವಿದ್ಯಾಲಯದಿಂದ ಮನೋವಿಜ್ಞಾನದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಏಳು ವರ್ಷಗಳ ಕಾಲ ಇಂಗ್ಲಂಡಿನಲ್ಲಿ, ಎಂಟು ವರ್ಷ ಝಾಂಬಿಯಾ ಹಾಗು ಯುನೆಸ್ಕೊದಲ್ಲಿ ಸೇವೆ ಸಲ್ಲಿಸಿದ್ದಾರೆ.


ಪುರಸ್ಕಾರ

    * ಇವರ "ಸಪ್ತಪದಿ" ಎಂಬ ಕೃತಿಗೆ ೧೯೯೮ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
    * "ನೆರಳು" ನಾಟಕಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭಿಸಿದೆ.
    * "ಸೆರಗಿನ ಕೆಂಡ" ರೇಡಿಯೊ ನಾಟಕಕ್ಕೆ ಅಖಿಲ ಭಾರತ ಬಹುಮಾನ ಬಂದಿದೆ.
    * ಇದಲ್ಲದೆ ಹಿಂದುಸ್ತಾನ್ ಟೈಮ್ಸ್ ಪ್ರಶಸ್ತಿ ಹಾಗು ಪ್ರಜಾವಾಣಿ ಪ್ರಶಸ್ತಿ ಸಹ ಲಭಿಸಿವೆ.

ಕವನ ಸಂಕಲನಗಳು :
 * ಏಳು ಸುತ್ತಿನ ಕೋಟೆ, ಹೇಸರಗತ್ತೆ ,ಬ್ರಾಹ್ಮಣ ಹುಡುಗ,ಸಪ್ತಪದಿ,ಹೃದಯಗೀತ, ಮಾತು ಮಾಟ

ನಾಟಕಗಳು
 * ಬಾಳಸಂಜೆ ,ನೀಲಿ ಕಾಗದ,ನೆರಳು,ವೈತರಣಿ,ಸೆರಗಿನ ಕೆಂಡ (ರೇಡಿಯೊ ನಾಟಕ)

ಕಥಾ ಸಂಕಲನ
* ಮಂದಾರ ಕುಸುಮ,ಏಳನೆಯ ಜೀವ,ಕತೆಗಾರನ ಕತೆ,

ಅನುವಾದ
* ಈ ಶತಮಾನದ ನೂರು ಇಂಗ್ಲಿಷ್ ಕವನಗಳು , ಮನಃಶಾಸ್ತ್ರ

೭.  ಗೊ. ರು. ಚನ್ನಬಸಪ್ಪ (G.R.Channabasappa)



ಗೊ. ರು. ಚನ್ನಬಸಪ್ಪ

ಕಾವ್ಯನಾಮ :ಗೊರುಚ
ಜನನ :೧೮ ಮೇ ೧೯೩೦   
ತಂದೆ :ರುದ್ರಪ್ಪಗೌಡ
ತಾಯಿ:ಅಕ್ಕಮ್ಮ
ಜನ್ಮ ಸ್ಥಳ :ಗೊಂಡೇದಹಳ್ಳಿ, ತರೀಕೆರೆ ತಾಲ್ಲೂಕು, ಚಿಕ್ಕಮಗಳೂರು.

೧೯೪೮ ಸರ್ಕಾರಿ ಶಾಲೆಯಲ್ಲಿ ಅಧ್ಯಾಪಕರಾಗಿ ಸೇರಿಸಿಕೊಂಡರು.
ಗಾಂಧೀಗ್ರಾಮದಲ್ಲಿ ಸಮಾಜಶಿಕ್ಷಣವನ್ನು ಕುರಿತು ತರಬೇತಿ ಗೊರುಚರವರು ಪಡೆದಿದ್ದಾರೆ.
ಭೂದಾನ ಚಳವಳಿ, ವಯಸ್ಕರ ಶಿಕ್ಷಣ, ಸೇವಾದಳಗಳಲ್ಲೂ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ.
ಕಸಾಪದ ಅಧ್ಯಕ್ಷರಾಗಿದ್ದಾಗ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿ, ೧೫೦ಕ್ಕೂ ಹೆಚ್ಚಿನ ಗ್ರಂಥಗಳ ಪ್ರಕಟಣೆಗೆ ಕಾರಣರಾದರು.
ಭಾರತ್ ಸ್ಕೌಟ್ ಮತ್ತು ಗೈಡ್ಸ್ ಗಳಿಗೆ ಹೆಡ್ ಕ್ವಾಟರ್ಸ್ ಕಮೀಷನರಾಗಿದ್ದರು.

ಸಾಹಿತ್ಯಕೃತಿಗಳು :

ಸಣ್ಣಕಥೆಗಳು:
ಮಹಾದೇವಿ, ಸದಾಶಿವ ಶಿವಾಚಾರ್ಯ, ಕರ್ನಾಟಕ ಪ್ರಗತಿಪಥ, ಚೆಲುವಾಂಬಿಕೆ, ಕುನಾಲ, ಸಾಕ್ಷಿ ಕಲ್ಲು, ಬೆಳ್ಳಕ್ಕಿ, ಹಿಂಡು ಬೆದರ್ ಯಾವೊ, ಬಾಗೂರು ನಾಗಮ್ಮ, ಗ್ರಾಮ ಗೀತೆಗಳು, ವಿಭೂತಿ, ಕರ್ನಾಟಕ ಜನಪದಕಲೆಗಳು

ಪ್ರಬಂಧ, ವಿಮರ್ಶಾ ಗ್ರಂಥಗಳು:
ಕರ್ನಾಟಕ ಜನಪದಕಲೆಗಳು

ಪ್ರಶಸ್ತಿ, ಪುರಸ್ಕಾರ, ಬಿರುದು:

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು.

೮. ಸಾ.ಶಿ. ಮರುಳಯ್ಯ (S.H.Marulasiddaiah) :


 

ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು.

ಜನಾಮ/ಪೂರ್ಣನಾಮ : ಸಾಸಲು ಶಿವರುದ್ರಯ್ಯ ಮರುಳಯ್ಯ
ಜನನ : ೨೮ ಜನವರಿ ೧೯೩೧
ತಂದೆ :ಶಿವರುದ್ರಯ್ಯ
ತಾಯಿ:ಸಿದ್ಧಮ್ಮ
ಜನ್ಮ ಸ್ಥಳ :ಸಾಸಲು ಗ್ರಾಮ, ಚಿಕ್ಕನಾಯಕನಹಳ್ಳಿ ತಾಲ್ಲೂಕು, ತುಮಕೂರು ಜಿಲ್ಲೆ
೧೯೫೫ ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ. ಎ. ಆನರ್ಸ್ ಪದವಿ.
ಪದವಿ:೧೯೫೬ ರಲ್ಲಿ ಎಂ. ಎ ಪದವಿ.

  ವೃತ್ತಿ:
ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.
ಬೆಂಗಳೂರು ವಿ.ವಿ. ಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ದುಡಿದಿದ್ದಾರೆ.

೧೯೭೯- ೮೩ರವರೆಗೂ ವಿಶ್ವಕೋಶದ ಪ್ರಧಾನ ಸಂಪಾದಕರಾಗಿದ್ದರು.
೧೯೮೯- ೯೦ರಲ್ಲಿ ಕನ್ನಡ ಸಾಹಿತ್ಯಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿದ್ದರು.
೧೯೯೫-೯೮ರಲ್ಲಿ ಸಾಹಿತ್ಯಾ ಪರಿಷತ್ತಿನ ಅಧ್ಯಕ್ಷರಾಗಿದ್ದರು.

ಸಾಹಿತ್ಯಕೃತಿಗಳು :
ಸಣ್ಣಕಥೆಗಳು:
ಶಿವತಾಂಡವ, ವಿಪರ್ಯಾಸ, ಘೋಷವತಿ, ಬೃಂದಾವನಲೀಲೆ, ರಾಸಲೀಲೆ, ರೂಪಸಿ, ಚೈತ್ರ- ಜ್ಯೋತಿ, ಬಾರೋ ಮೈಲಾರಕೆ, ಮರೀ ಬೇಡಿ, ವಿಜಯ ವಾತಾಪಿ, ಶಿವಲೀಲೆ

ಕಥನಕವನಗಳು:ಶ್ರೀ ಮರುಳಸಿದ್ಧೇಶ್ವರ ವಚನವೈಭವ
ಕಾದಂಬರಿ :ನೂಪುರಾಲಾಸ, ಪುರುಷಸಿಂಹ, ಹೇಮಕೂಟ, ಸಾಮರಸ್ಯ ಶಿಲ್ಪ, ಅನುಶೀಲನೆ.
ಕವನ ಸಂಕಲನಗಳು :ಕೆಂಗನ ಕಲ್ಲು, ಮನಿಷಾ, ನನ್ನ ಕವನಗಳು, ಸುರಭಿ
ವಿಮರ್ಶೆ, ಪ್ರಬಂಧಗಳು: ಭಾಸನ ಮಕ್ಕಳು, ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ.
ಜೀವನ ಚರಿತ್ರೆ : ಭಾರತೀಯ ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡಿಗರು.   
ಪ್ರಶಸ್ತಿ, ಪುರಸ್ಕಾರ, ಬಿರುದು:
೧೯೭೧ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ ಎಂಬ ಕೃತಿಗೆ ಪಿ. ಎಚ್. ಡಿ ಪದವಿ ಪಡೆದರು.

ಕೆಂಗನ ಕಲ್ಲು ಕವನ ಸಂಕಲನಕ್ಕೆ ರಾಜ್ಯ ಸರ್ಕಾರದ ಪ್ರಶಸ್ತಿ ಬಂದಿದೆ.
ಭಾಸನ ಮಕ್ಕಳು ಎಂಬ ವಿಮರ್ಶೆಗೆ ದೇವರಾಜ ಬಹದ್ದೂರ್ ಪ್ರಶಸ್ತಿ ಬಂದಿದೆ.


೯ . ಸುಮತೀಂದ್ರ ನಾಡಿಗ (sumateendra Nadig):




ಇವರು ಕನ್ನಡದ ಲೇಖಕರು ಹಾಗು ಖ್ಯಾತ ವಿಮರ್ಶಕರು

ಪುತ್ತೂರು ವಿವೇಕಾನಂದ ಕಾಲೇಜಿನ ಶಿವರಾಮ ಕಾರಂತ ಅಧ್ಯಯನ ಕೇಂಧ್ರದ ೨೦೦೬ನೇ ಸಾಲಿನ ನಿರಂಜನ ಪ್ರಶಸ್ತಿ ದೊರಕಿದೆ .

Monday, February 01, 2010

kannada jnanapeetha prashasti vijetaru

ಕನ್ನಡದ ಜ್ಞಾನಪೀಠ ಪ್ರಶಸ್ತಿ ವಿಜೇತರು

The Jnanpith Award is the highest literary award in India . The name of the award is taken from  sanskrit  jnāna-pīṭha = knowledge-seat

ಇಲ್ಲಿಯವರೆಗೆ ನಮ್ಮ ಕನ್ನಡಿಗರು , ಭಾರತದಲ್ಲೇ ಅಧಿಕ ಅಂದರೆ  8 ಬಾರಿ  ಜ್ಞಾನಪೀಠ  ಪ್ರಶಸ್ತಿಯನ್ನು  ಗಳಿಸಿದ್ದಾರೆ:





೧.ಕೆ .ವಿ ಪುಟ್ಟಪ್ಪ (Kuppalli venkatappa puttappa)  (Kuvempu) - ಶ್ರೀ  ರಾಮಾಯಣ  ದರ್ಶನಂ ೧೯೬೭ (1967)
೨.ದ.ರಾ .ಬೇಂದ್ರೆ ನಾಕುತಂತಿ  (Naku Thanthi) (Four Strings)  -೧೯೭೩ (1973)
೩.ಕೆ .ಶಿವರಾಮ ಕಾರಂತ (ಮೂಕಜ್ಜಿಯ  ಕನಸುಗಳು ) (Mookajjis dreams) - ೧೯೭೭ -(1977)
೪.ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಚಿಕ್ಕವೀರ ರಾಜೇಂದ್ರ ) ೧೯೮೩ - 1983
೫.ವಿ.ಕೃ.ಗೋಕಾಕ್ . (Vinayaka Krishna Gokak) (ಭಾರತ ಸಿಧು ರಶ್ಮಿ ಗೆ ) ೧೯೯೦ (1990)
೬.ಯು .ಆರ್ .ಅನಂತಮೂರ್ತಿ ೧೯೯೪ (೧೯೯೪) 
೭. ಗಿರೀಶ್ ಕಾರ್ನಾಡ್ . (for his contributions to modern Indian drama) - ೧೯೯೮ (1998)
8. ಚಂದ್ರಶೇಖರ ಕಂಬಾರ (Chandrashekahara Kambara) -2010

ವಿಜೇತರ  ಕಿರು ಪರಿಚಯ : 
------------------------------

೧. ಕೆ .ವಿ ಪುಟ್ಟಪ್ಪ (Kuppalli Venkatappagowda Puttappa (Kuvempu) - ಶ್ರೀ  ರಾಮಾಯಣ  ದರ್ಶನಂ ೧೯೬೭ (1967) :




  

ಶ್ರೀ ಪುಟ್ಟಪ್ಪನವರು
ಕಾವ್ಯನಾಮ:     ಕುವೆಂಪು
ಜನನ: ೧೯೦೪*
ಕುಪ್ಪಳ್ಳಿ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
ವೃತ್ತಿ:     ಲೇಖಕ, ಪ್ರಾಧ್ಯಾಪಕ, ಕುಲಪತಿ*
ಸಾಹಿತ್ಯದ ವಿಧ(ಗಳು):     ಕಥೆ, ಕವನ, ಕಾದಂಬರಿ
ವಿಷಯಗಳು:     ಕರ್ನಾಟಕ, ರಾಮಾಯಣ, ಜೀವನ, ಶಿವಮೊಗ್ಗ
ಸಾಹಿತ್ಯ ಶೈಲಿ:     ಬಂಡಾಯ, ನವೋದಯ   
ಪ್ರಭಾವಗಳು:     ಕಾರ್ಲ್ ಮಾರ್ಕ್ಸ್, ಕುಮಾರವ್ಯಾಸ, ವರ್ಡ್ಸ್ ವರ್ತ್,ರಾಮಕೃಷ್ಣ ಪರಮಹಂಸ

ರಾಮಾಯಣ ದರ್ಶನಂ : 

ಕುವೆಂಪುರವರು ಬರೆದ ಈ ಕೃತಿಯು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತವಾಗಿದೆ. ಕನ್ನಡದ ಅತ್ಯಮೂಲ್ಯ ಗ್ರಂಥಗಳಲ್ಲಿ ಒಂದು, ಈ ಕೃತಿ. ಈ ಕೃತಿ ಕನ್ನಡದ ಮೊದಲ ಆಧುನಿಕ ಮಹಾಕಾವ್ಯ; ಸರಳರಗಳೆಯನ್ನು ಕನ್ನಡದಲ್ಲಿ ಮೊತ್ತಮೊದಲ ಬಾರಿಗೆ ಬಳಸಲಾಗಿದೆ.

http://www.youtube.com/watch?v=f63bksTjzTA

೨ .ದ.ರಾ .ಬೇಂದ್ರೆ -ನಾಕುತಂತಿ  (Naku Thanthi) (Four Strings)  -೧೯೭೩ (1973) 

Dattatreya Ramachandra Bendre ದತ್ತಾತ್ರೇಯ ರಾಮಚಂದ್ರ ಬೇಂದ್ರೆ (January 31, 1896 - 21 October 1981) was amongst the most famous of kannada poets of the navodaya period Praised as varakavi, literally 'gifted poet'. ಜ್ಞಾನಪೀಠ ಪಡೆದ ೨ ನೆಯ ಕನ್ನಡಿಗ .ಅವರು ಅಂಬಿಕಾತನಯದತ್ತ ಅನ್ನುವ ಹೆಸರಿಂದ ಕೂಡ ಬರೆದಿದ್ದಾರೆ.  .ಭಾರತ ಸರ್ಕಾರದಿಂದ ಅವರಿಗೆ ಪದ್ಮ  ಶ್ರೀ ಪ್ರಶಸ್ತಿ ಕೂಡ ದೊರಕಿತ್ತು .




೩. ಕೆ .ಶಿವರಾಮ ಕಾರಂತ (ಮೂಕಜ್ಜಿಯ  ಕನಸುಗಳು ) (Mookajjis dreams) - ೧೯೭೭ -(1977)





Kota Shivaram Karanth (October 10, 1902 - December 9, 1997) was a major Kannada writer, social activist, environmentalist, Yakshagana artist, film maker and thinker. He was described as the "Rabindranath Tagore of Modern India who has been finest novelist-activist since independence" by Ramachandra Guha. ಜ್ಞಾನಪೀಠ ಪಡೆದ ೩ ನೆ ಕನ್ನಡಿಗ .He is also been adjudged as one of the ten makers of india in last 60 years by CNN-IBN. ಪದ್ಮಭೂಷಣ ಪ್ರಶಸ್ತಿ  ಬಂದರೂ ಅದನ್ನು ತುರ್ತು ಪರಿಸ್ಥಿತಿ ಹೇರಿದ (ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ) ಕಾರಣ  ಪ್ರಶಸ್ತಿಯನ್ನು ಹಿಂತಿರಿಗಿಸಿದ ಧೀಮಂತ ವ್ಯಕ್ತಿ. 

೧೯೯೩ (1993) ರಲ್ಲಿ ಅವರನ್ನು ನಮ್ಮ ಊರಾದ ಶಿವಮೊಗ್ಗದ ಪ್ರಸಿದ್ಧ ಕರ್ನಾಟಕ ಸಂಘದಲ್ಲಿ ಭೇಟಿಯಾಗಿ ಅವರಿಂದ ಹಸ್ತಾಕ್ಷರ ವನ್ನು ಪಡೆದಿದ್ದೆ .ಇದು ನನ್ನ ಸೌಭಾಗ್ಯ ವೆಂದು ಭಾವಿಸುವೆ .


೪.ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಚಿಕ್ಕವೀರ ರಾಜೇಂದ್ರ ) ೧೯೮೩  (1983) :
 





 


Masthi Venkatesha Iyengar (June 6, 1891 - June 6, 1986) was a popular writer in Kannada language. ಕನ್ನಡದಲ್ಲಿ ಜ್ಞಾನಪೀಠ ಪಡೆದವರಲ್ಲಿ  ನಾಲ್ಕನೆಯವರು . He was popularly referred to as ಮಾಸ್ತಿ ಕನ್ನಡದ ಆಸ್ತಿ which means Maasti is Kannada's Treasure. ಅವರು ಸಣ್ಣ ಕಥೆಗಳಿಂದಲೇ ಚಿರಪರಿಚಿತರು . He wrote under the pen name Srinivasa. He was honored with the title Rajasevasakta by then Maharaja of Mysore Nalvadi Krishnaraja Wadeyar.


೫ .ವಿ. ಕೃ ಗೋಕಾಕ್  (Vinayaka Krishna Gokak) (ಭಾರತ ಸಿಂಧು  ರಶ್ಮಿ ಗೆ ) ೧೯೯೦ (1990) 






Vinayaka Krishna Gokak (1909-1992) was a major writer in Kannada language and a scholar of English and Kannada literatures. ೫ ನೆ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡಿಗ for his epic ಭಾರತ ಸಿಂಧು ರಶ್ಮಿ . Bharatha Sindhu Rashmi that deals with the vedic age is perhaps the longest epic written in any language in the 20th Century.


೬.ಯು .ಆರ್ .ಅನಂತಮೂರ್ತಿ ೧೯೯೪ (೧೯೯೪) : 


Udupi Rajagopalacharya Ananthamurthy (born December 21, 1932), is a contemporary writer and critic in the Kannada language and is considered as one of the pioneers of the Navya movement. He is well known among Indian authors.


http://www.youtube.com/watch?v=mZZwFmhz22Q

ಜ್ಞಾನಪೀಠ ಪ್ರಶಸ್ತಿ ಪಡೆದ ೬ನೆ ಕನ್ನಡಿಗ . ೧೯೯೮ ರಲ್ಲಿ ಪದ್ಮ ಭೂಷಣ ಪ್ರಶಸ್ತಿ ಬಂದಿದೆ . ಯಾವಾಗಲು  ಸುದ್ದಿಯಲ್ಲಿ ಇರುವ , ಬೇರೆ ಬೇರೆ ವಿಷಯಗಲ್ಲಿ ಸ್ಪಂದಿಸುವ ಚಲನಶೀಲ ,ಬುದ್ದಿವಂತ ವ್ಯಕ್ತಿ . ಹಲವು ಬಾರಿ ವಿವಾದಕ್ಕೆ ಸಿಕ್ಕಿ ಕೊಂಡಿದ್ದಾರೆ.

೩-೪ ವರ್ಷದ ಕೆಳಗೆ ಇವರನ್ನು ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಒಂದು ಕಾರ್ಯ ಕ್ರಮದಲ್ಲಿ  ನೋಡಿದ್ದ್ದೆ . ಇವರು ಬಹಳ ಶಿಸ್ತಿನ ಮನುಷ್ಯ .

 ೭. ಗಿರೀಶ್ ಕಾರ್ನಾಡ್ . (for his contributions to modern Indian drama") - ೧೯೯೮ (1998)

 

Girish Raghunath Karnad (born 19 May 1938) is a contemporary writer, playwright, actor and movie director in Kannada language. ಜ್ಞಾನಪೀಠ ಪಡೆದ ೭ನೆ ಕನ್ನಡಿಗ.
For four decades Karnad has been composing plays, often using history and mythology to tackle contemporary issues.His plays has been directed by eminent directors like Ebrahim Alkazi, B. V. Karanth, Alyque Padamsee, Prasanna, Arvind Gaur, Satyadev Dubey, Vijaya Mehta, Shyamanand Jalan and Amal Allana. He is also active in the world of Indian cinema working as an actor, director, and screenwriter, earning numerous awards along the way. ಇವರಿಗೆ ಭಾರತ ಸರಕಾರದಿಂದ ಪದ್ಮ ಭೂಷಣ ಪ್ರಶಸ್ತಿ ಬಂದಿದೆ .


http://www.youtube.com/watch?v=-c5TpucaAp4


8.    ಚಂದ್ರಶೇಖರ ಕಂಬಾರ (Chandrashekhara Kambara) :



(ಜನನ : ಜನವರಿ 2, 1937 ) (January 2, 1937)  ಚಂದ್ರಶೇಖರ ಕಂಬಾರ :ಕನ್ನಡದ ಒಬ್ಬ ಪ್ರತಿಭಾವಂತ ಕವಿ, ನಾಟಕಕಾರ, ಜಾನಪದ ತಜ್ಞ, ಸಿನಿಮಾ  ನಿರ್ದೇಶಕ ಮತ್ತು ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ಪ್ರಥಮ ಕುಲಪತಿಗಳಗ್ಗಳು.
ಈ ಬಾರಿ ನಮ್ಮದೇ ರಾಜ್ಯ ಬೆಳಗಾವಿಯಲ್ಲಿ,   ರಾಷ್ಟ್ರಪತಿ ಪ್ರಣಬ್ ಮುಖೆರ್ಜೀಯವರಿಂದ ಪಡೆದದ್ದು ಕನ್ನಡಿಗರು ಹೆಮ್ಮೆ  ಪಡುವ ವಿಷಯ ..



(Born on January 2, 1937) is a prominent poet, playwriter, folklorist, film director in Kannada language and the founder-vice-chancellor of Kannada University in Hampi.

Tuesday, January 26, 2010

Kannadigarige padmaprashastiya gari mattu surimale

ಹಾಡುಗಾರ C.ಅಶ್ವಥ್  , ನಟರಾದ Dr.ವಿಷ್ಣುವರ್ಧನ್ ಮತ್ತು ಅಶ್ವಥ್ ಅವರ ಇತ್ತೀಚಿನ  ನಿಧನದಿಂದ ನೊಂದಿದ್ದ  ಕನ್ನಡಿಗರಿಗೆ ನಿನ್ನೆ ಪ್ರಕಟವಾದ ಪದ್ಮಶ್ರೀ ,ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿ ಸ್ವಲ್ಪ ನೆಮ್ಮದಿ ತಂದಿದೆ . ಇವರೆಲ್ಲರ ಸಾಧನೆ ಕನ್ನಡಿಗರಿಗೆ ಮಾತ್ರವಲ್ಲದೆ ಇಡೀ ಭಾರತೀಯರಿಗೆ ದಾರಿದೀಪವಾಗಿದೆ

ಪ್ರಶಸ್ತಿ ಪಡೆದವರ ಕಿರು ಪರಿಚಯ :

 

1. Pandit Puttaraj Gawai : (ಪಂಡಿತ್ ಪುಟ್ಟರಾಜ ಗವಾಯಿ )
    -------------------------


with the blessings of his Guru,Puttaraj [96 years] (Visually challenged)strove to fulfill his responsibilities as the patron of hundreds of blind orphans. He pursued his spiritual life with dedication to ‘Linga Pooja’ and devoting enough time to serve music, literature and theatre.As a result, his works ‘Sangeet Shastra Jnana’.”Tabla Shikshaka” and “GuruSudha” Part 1 and  2 on Music were completed. In Sanskrit he wrote “Shrimat Kumara Geetha”,”Kumareshwara Kavya”,”Shri Linga Sooktha”,”Tatparya Sahit Sri Rudra” and “Panchakshara Suprabhata”.In Hindi,he wrote “Basava Purana” (President Award winner)”Siddha Linga Vijaya”,”Sidhantha Shikamani” etc.In Kannada his works include “Akkamahadevi Purana”,”Haveri ShivabasavaPurana”,“Ankalagi Adavi Siddeswara Purana”, “Huchala Guru Siddeshwara Purana”, “Purathanara Purana”,Kalikeri Guru Mahima Purana”, “Veerabhadreshwara Purana”, “Sharana Basaveshwara Purana” and many more.He was honored with more than 100 titles like “Ubhaya Gayana Vadanacharya”, “Ganayogi”, “Kavishiromani”, Thribhasha KaviRathna” etc.He won many National Awards and was honoured by Sangeetha Nataka Acadamy,Sahitya Nataka Academy,Dharwad Karnataka University(Hon. Doctorate) and recently in 99 during the Dasara Festival,Karnataks Government conferred oh him the first ever “Rajya Sangeetha Vidwan” title.

2. Balagangadharanatha  Swamiji  (ಬಾಲಗಂಗಾಧರನಾಥ ಸ್ವಾಮೀಜಿ ):
    -------------------------------------------------------------------



The Swami is the pontiff of Adichunchanagiri Mutt in Mandya district. The mutt has been into many social service including disseminating education to masses.Adichunchunagiri Mutt runs several educational institutions, including a medical college and residential school for poor children and blind from rural areas.

ಒಂದೆರೆಡು ವರ್ಷದ ಕೆಳಗೆ ಬೆಂಗಳೂರಿನ ವಿಜಯನಗರದ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಿತ್ತು. ಸ್ವಾಮೀಜಿಯವರು ಭಕ್ತರಿಗೆ ನೀಡುವ ಆಶೀರ್ವಾದ ,  ವ್ಯವಸ್ಥೆ ,ಕಿರಿಯ ಮಕ್ಕಳಿಗೆ ಸಂಗೀತಕ್ಕೆ ನೀಡುವ ಪ್ರೋತ್ಸಾಹ ಅಭಿನಂದನೀಯ .


3. Arundhati Nag (ಅರುಂಧತಿ ನಾಗ್) :
   ---------------------------------------


Arundhati Nag is a well-known in the field of theatre and art in the country. She founded Ranga Shankara, the dream project of her late husband and actor, Shankar Nag. So far more than 2,000 shows of different plays have been staged in the theatre.

4. Prof M R Satyanarayana Rao (ಪ್ರೊಫೆಸರ್ .ಎಂ .ಆರ್ .ಸತ್ಯನಾರಾಯಣ ರಾವ್ )
-----------------------------------------------------------------


Mr. Satyanarayana Rao, is president of Jawaharlal Nehru Centre for Advanced Scientific Research 9(JNCASR), said he was happy that his work in molecular and cell biology had been recognised.He was earlier with the Department of Biochemistry, Indian Institute of Science (IISc), Bangalore.Prof Rao was the first scientist in the country to set up the Chromatin Biology Lab. Prof Rao said his team was working on cancer genomics. His team is working on new tools for understanding brain tumour

5.  Dr Vijayalakshmi Ravindranath :( ಡಾ .ವಿಜಯಲಕ್ಷ್ಮಿ ರವೀಂದ್ರನಾಥ್ )




Dr Vijayalakshmi Ravindranath, chairperson of the newly established Centre for Neurosciences at IISc has been working on research to understand the pathogenesis of neurodegenerative disorders like Parkinson’s.

“I hope our lab will soon come out with a cure to brain disorder and discovering Padma Bhushandisease modifying therapies,” she said.




6.  Prof.K.S.Gopinath : (ಪ್ರೊಫೆಸರ್ .ಕೆ.ಎಸ್.ಗೋಪಿನಾಥ್ )
    ----------------------------------------------------






He is Senior surgical oncologist with excellent academic credentials. Post Graduate qualifications with an FRCS(Ed) from the reputed College of Surgeons, Edinburgh, UK and MS in General Surgery from Mumbai Univesity. Recipient of several prestigious awards for unstinting service advanced/intensive training in surgical oncology. Hands-on expertise of over three decades in the field of oncology from the grass root levels in the rural and urban areas.

Promoter Director and Consultant Surgical Oncologist Bangalore Institute of Oncology, pioneering the first comprehensive and dedicatted multi-disciplinary cancer in India. Instrumental in starting Department of Oncology at several premier medical colleges in bangalore and Karnataka Founder Trustee and Chairman for research organizations and charitable trusts working towards the cause of cancer patients.

Hold Key positions of responsibility at several medical associations focused towards surgical oncology. Author of several research publication/books and presentations at national and global seminars. Deep sense of urge to arrive at long-lasting solutions in the field of oncology; incolved with extensive research work. Promoter of cancer eduction promoter of cancer education programs through diverse media.

7. Dr.B.Ramana Rao ( ಡಾ.ಬಿ.ರಮಣ ರಾವ್ ) 




8.  Dr.B.M.HEGDE  (ಡಾ.ಬಿ.ಎಂ.ಹೆಗಡೆ) :
     -----------------------------------------

 

For the thousands of patients, over the years, he embodies hope. Allaying fears, giving succor, soothing tensions he is to them the doctor with his hand on the pulse of the common man. Talking their language (he speaks about seven) identifying with their woes, relating to their despairhe heals them, combining his wealth of specialized knowledge in cardiology with compassion and clarity. His healthy respect for the native and complementary systems of medicine inspires in the illiterate and ill a hope of better tidings.  Teaching is in his blood. He started teaching at a very young age and is teaching even today, when he finds time. Prof Hegde has been teaching all over the world and has requests pouring in from different quarters. The best teacher awards that he obtained many times speak for themselves. He is acclaimed to be a good communicator and has bagged the Best Communicator Award from the local chapter of the Public Relations Society of India. He attracts students for electives from many countries. His disdain against the hi-tech stuff for diagnosis when the time tested bedside methods and common sense alone would suffice,  have molded hundreds of future doctors.

Many a time his methods were considered unconventional but, the thousands of students who have graduated from there stand testimony to the fact that his methods did pay rich dividends. He is on the Governing bodies of many prestigious institutions in India and abroad, contributing his might to uphold the highest ethical and professional standards through them. A Visiting Professor in many countries , he also has been considered a considerate and competent examiner for graduate and postgraduate students. He has guided many students for their doctoral thesis in many Universities, in addition to being the Ph.D. examiner in some of those Universities.Prof Hedge regularly communicates with people through AIR, Doordarshan, BBC and Zee TV, London. His regular column "Doctor Speaks" in the Bhavan's journal is very much appreciated. 

ಕಳೆದ ವರ್ಷ,ಬೆಂಗಳೂರಿನಲ್ಲಿ ಒಂದು ಕಾರ್ಯಕ್ರಮದಲ್ಲಿ ಇವರನ್ನು ನೋಡುವ ಮತ್ತು ಅವರ  ಮಾತನ್ನು ಕೇಳುವ ಅವಕಾಶ ನನಗೆ ದೊರಕಿತ್ತು  !

Friday, January 22, 2010

Chindodi Leela - Kalaarasikara managedda Ranganayaki




ವೃತ್ತಿ  ರಂಗಭೂಮಿಯನ್ನೇ  ಉಸಿರಾಗಿಸಿಕೊಂಡಿದ್ದ  ಕನ್ನಡದ ಹಿರಿಯ  ರಂಗ ಭೂಮಿ  ಹಾಗೂ ಚಿತ್ರರಂಗ  ಕಲಾವಿದೆ  ಹಾಗೂ  ಚಿಂದೋಡಿ  ಲೀಲ  [೭೨ -72 ವರ್ಷ ]  ನಮ್ಮನ್ನಗಲಿದ್ದಾರೆ  .

ಅಭಿನವ ಸಾಮ್ರಾಜ್ಞಿ(1970),ಪದ್ಮಶ್ರೀ (1988),Dr.ಗುಬ್ಬಿ  ವೀರಣ್ಣ (2002) ,ಕೇಂದ್ರ  ನಾಟಕ  ಮತ್ತು  ಸಂಗೀತ  ನಾಟಕ  ಪ್ರಶಸ್ತಿ (2004) ಮುಂತಾದವುಗಳಿಗೆ  ಪಾತ್ರರಾಗಿದ್ದರು .

ಆವ್ರು  "ಗುಣಸಾಗರಿ ,"ಮುದುಕನ  ಮದುವೆ ","ಪೊಲೀಸನ  ಮಗಳು (Guiness Record ) " ಮುಂತಾದ  ನಾಟಕಗಳಿಂದ ಮನೆ   ಮಾತಾಗಿದ್ದರು .

30 ಕ್ಕೂ  ಹೆಚ್ಚು  ಚಲನ ಚ್ತಿತ್ರಗಳಲ್ಲೂ  ಅಭಿನಯಿಸಿದ್ದರು .ಅವುಗಳಲ್ಲಿ  ಪ್ರಬುಲಿಂಗ ಲೀಲೆ    ,ಕಿತ್ತೂರು  ಚೆನ್ನಮ್ಮ ,ಗಾಳಿ  ಗೋಪುರ ,ಭಲೇ  ಹುಡುಗ ,ಕೃಷ್ಣದೇವರಾಯ  ,ಶರಪಂಜರ ,ಮುಕ್ತಿ ,ಕುಮಾರ  ರಾಮ ,ರೈತನ ಮಕ್ಕಳು  ,ತೇಜಸ್ವಿನಿ ,ನವಜೀವನ  ಮುಖ್ಯವಾದದ್ದು .

1950 ರಲ್ಲಿ  5 ವರ್ಷದ  ಬಾಲಕಿಯಗಿದ್ದಾಗ  "ಶಿವಯೋಗಿ  ಸಿದ್ದರಾಮೇಶ್ವರ " ನಾಟಕದಲ್ಲಿ  ಬಾಲಸಿದ್ದ ರಾಮೇಶ್ವರನ ಪಾತ್ರದಲ್ಲಿ  ರಂಗ  ಪ್ರವೇಶ  ಮಾಡಿದರು . ೨(2)   ತರಗತಿಯ ವರೆಗೆ  ಓದಿದ್ದ  ,ಅವರ  ಸಾಧನೆ  ಅವರನ್ನು  ನಾಟಕ  ಅಕಾಡೆಮಿ  ಅಧ್ಯಕ್ಷ  ರನ್ನಾಗಿ   ಮಾಡಿತು .ಕಂಪನಿ  ನಾಟಕಗಳಿಗೆ   ಸಬ್ಸಿಡಿ   ನೆರವು ,ಮಾಸಾಶನ , ನಾಟಕ  ಪ್ರದರ್ಶನಕ್ಕೆ ಅಡ್ಡಿಯಾಗಿದ್ದ  ಪರವಾನಿಗೆಗೆ ಏಕ  ಗವಾಕ್ಷಿ  ಪದ್ಧತಿ  ಜಾರಿಗೊಳಿಸಿದ್ದು   ಎಲ್ಲರನ್ನು  ಬೆರಗು  ಮಾಡುವಂತೆ  ಮಾಡಿತ್ತು


ದೆಹಲಿ ,ಹೈದರಾಬಾದ್ ,ಕೇರಳ ,ಮಹಾರಾಷ್ಟ್ರ ,ವಾರಣಾಸಿ  ಅಲ್ಲದೆ  ಅಮೆರಿಕ ,ಇಂಗ್ಲೆಂಡ್ನಲ್ಲೂ  ನಾಟಕ  ಪ್ರದರ್ಶನಗಳ  ಮೂಲಕ  KBR Drama  comapny ಹೆಸರನ್ನು  ಚಿರ ಸ್ಥಯಿಯಗಿಸಿದರು    .ಅವರ  ಮನೆಯ  ಹಿರಿ ,ಕಿರಿಸದಸ್ಯರನ್ನೆಲ್ಲ  ಲೆಕ್ಕ  ಹಾಕಿದರೆ  25 ಕ್ಕೂ  ಅಧಿಕ  ಕಲಾವಿದರು  ಸಿಗುತ್ತಾರೆ .

ಕಲಾವಿದರ  ಬದುಕು ,ಬವಣೆ  ಅರಿತ್ತಿದ್ದ  ಚಿಂದೋಡಿ ಲೀಲ ಕಲಾವಿದರ  ಮೇಲೆ  ವಿಶೇಷ  ಪ್ರೀತಿ   ಹೊಂದಿದ್ದರು .ಅವರನ್ನು  ಗೌರವಿಸುತ್ತಿದ್ದರು .

ತವರು  ದಾವಣಗೆರೆ  ಹಾಗೂ  ಅತಿಯಾಗಿ  ಪ್ರೀತಿಸುತ್ತಿದ್ದ  ಚಿಂದೋಡಿ  ಮನೆತನ  ಹೆಸರಲ್ಲಿ  ರಂಗಮಂದಿರ  ಸ್ಥಾಪಿಸಿದ್ದರು   .

1994 ರಲ್ಲಿ  ನಮ್ಮ  ಊರಾದ  ಶಿವಮೊಗ್ಗದಲ್ಲಿ  ನಾಟಕ  ಪ್ರದರ್ಶನವಿದ್ದಾಗ  ಬಂದಾಗ  ಅವರನ್ನು  ಭೇಟಿಯಾಗಿದ್ದೆ  ಮತ್ತು  ಅವರಿಂದ  ಹಸ್ತಾಕ್ಷರವನ್ನು ತೆಗೆದು ಕೊಡಿದ್ದೆ   .






ಇಂದು  ಅವರ  ಅಂತಿಮ  ದರ್ಶವನ್ನು  ಪಡೆಯಲು  ಹೋದಾಗ  ಅವರನ್ನು   ನೋಡಿದಾಗ  ಅವರು  ಇನ್ನೊಂದು  ನಾಟಕಕ್ಕಾಗಿ  ತಯಾರಾಗಿ  ಮಲಗಿದವರಂತೆ  ಗೋಚರಿಸಿದರು   http://www.youtube.com/watch?v=dUS8uChmbIA .

ಅವರ  ಆತ್ಮಕ್ಕೆ  ಭಗವಂತ  ಶಾಂತಿ  ನೀಡಲಿ  ಮತ್ತು  ನಮ್ಮ  ನಾಟಕ  ರಂಗಕ್ಕೆ  ಅವರು  ನೀಡಿದ  ಮಾರ್ಗದರ್ಶನ ,ಪ್ರೋತ್ಸಾಹ  ನಮ್ಮ  ಪೀಳಿಗೆಯವರಿಗೆ   ಮಾರ್ಗದರ್ಶನ  ವಾಗಲಿ .

Tuesday, January 19, 2010

V K Murthy - Hemmeya kanndadiganige sanda Dada saheb phalke prashasti

















Kannadiga,Cinematographer V K Murthy (87 years)has been chosen for the Dada Saheb Phalke Award for the year 2008.

Born in 1923 in Mysore, Murthy earned his diploma in cinematography from S J Polytechnic, Bangalore in its very first batch 1943-46.which he joined and after obtaining a diploma certificate in 1946, moved on to the then Bombay for internship in cinematography.Having spent nearly five decades in Mumbai, the ace cinematographer is now based in Bangalore.

The award is conferred annually by the Government of India for outstanding contribution to films. This is the first time that a cinematographer has been selected for this award.

Murthy is credited with providing some of Indian cinema's most breathtaking visual moments in classics like Guru Dutt's Kagaz Ke Phool, Sahib Biwi Aur Ghulam, Baazi, Jaal, Chaudavin Ka Chand, Pyasa, 12 O'Clock and Ziddi. In fact, he has worked in most of Guru Dutt's movies.
He also partnered for Pakeezah and Razia Sultan.

His working life spans four long decades, from his early collaboration with Guru Dutt IN the 1950s to his work in Shyam Benegal's mega-serial Bharat Ek Khoj and one of the most acclaimed Kannada movies titled Hoova Hannu in 1993.

He is a recipient of the IIFA Lifetime Achievement Award in Amsterdam in 2005.

Murthy will be the 56th recipient of the Dada Saheb Phalke Award. The President of India will confer the award, which carries a cash prize of Rs 10 lakh, a Swarna Kamal and a shawl.

I got an opportunity to attend a function in Townhall in Bangalore on 2nd February wherte VK murthy was felicitated. I saw VK murthy from so near .I took his couple of photos and a viedo also .

Here are his photos and videos I took :






V. K. Murthy , a one-time violinist and jailed freedom fighter, was Guru Dutt's regular cameraman on his movies. He provided some of Indian cinema's most breathtaking images in starkly contrasted black and white. He also shot India's first cinemascope (75mm) movie, Kaagaz Ke Phool. For his contribution to film industry, particularly Indian film industry he was awarded the IIFA Lifetime Achievement Award ceremony held at Amsterdam in 2005.

The hero behind the screen V. K. Murthy is the one who created mesmerizing effects with his cinematography received the prestigious IIFA Lifetime Achievement Award in 2005. An ace Cinematographer from Bangalore was part of the Guru Dutt team. This stalwart was the cinematographer for one of the most acclaimed Kannada movie Hoovu Hannu - a directorial production of Rajendra Singh Babu and incidentally, Murthy has acted in that film too!

In 1959 Murthy shot India’s first cinemascope movie ‘Kagaz Ke Phool’ .Guru Dutt's Kaagaz Ke Phool, a movie considered his best was appreciated for its supremacy. More than anything else, what it won the most accolades for was its cinematography that created unparalleled history in the field of cinematography. It was none other than V. K. Murthy who did the magic and he even won a Filmfare Award. He repeated the feat for Sahib Bibi Aur Ghulam getting the 1962 award. He never worked with any other directors as long as Dutt was alive. Some of Murthy's best work is found in Guru Dutt's movies like Pyaasa, Sahib Bibi Aur Ghulam and Aar-Paar. Murthy then worked with Kamal Amrohi on his masterpiece, Pakeezah and Razia Sultan. Post Guru Dutt, he like many of Guru Dutt team were not able to give any pinnacle work. In later years, he worked with directors like Pramod Chakravarthy (Naya Zamana, Jugnu), Shyam Benegal and Govind Nihalani (Tamas).

Tuesday, January 12, 2010

Kannada etta , yake,hege ?

Kannada (ಕನ್ನಡ) is one of the major Dravidian languages of India, spoken predominantly in the state of Karnataka. Kannada, whose native speakers are called Kannadigas (ಕನ್ನಡಿಗರು Kannadigaru), number roughly 38 million, making it the 27th most spoken language in the world. It is one of the scheduled languages of India and the official and administrative language of the state of Karnataka.

The Kannada language is written using the Kannada script. The other native languages of Karnataka, Tulu, Kodava Takk, Beary bashe and Konkani are also written using the Kannada script.

Kannada is attested epigraphically from the mid-1st millennium CE, and literary Old Kannada flourished in the 9th to 10th century Rashtrakuta Dynasty. Contemporary Kannada literature is the most successful in India, with India's highest literary honor, the Jnanpith awards, having been conferred seven times upon Kannada writers, which is the highest for any language in India. Based on the recommendations of the Committee of Linguistic Experts, appointed by the Ministry of Culture, the Government of India officially recognised Kannada as a classical language.

ಇಷ್ಟೆಲ್ಲಾ ಆದ್ರೂ ಬೆಂಗಳೂರಿನಲ್ಲಿ (ನಮ್ಮದೇ ಕರ್ನಾಟಕದ ರಾಜಧಾನಿ)ಕನ್ನಡ ಮಾತನಾಡುವರು ಅಲ್ಪಸಂಖ್ಯೆಯವರಾಗಿದ್ದಾರೆ .ಇದಕ್ಕೆಲ್ಲಾ ನಾವೇ ಕಾರಣ .ನಾವು ಬಹಳಷ್ಟು ಕನ್ನಡಿಗರು ಕನ್ನಡದಲ್ಲಿ ಮಾತನಾಡಿದರೆ ನಮಗೆ  ನಮ್ಮ prestige ಕಡಿಮೆ ಅಂತ ಬಾವಿಸುತ್ತಿರುವಂತಿದೆ .ನಾವು ಈ ಭ್ಭ್ರಾಂತಿಯಿಂದ ಹೊರಬರಬೇಕು .

ಇನ್ನು  ನಾವು ಕನ್ನಡ ಚಲನ ಚಿತ್ರಗಳನ್ನು ನೋಡುವುದು ಅಪರೂಪ .ಯಾಕೆ ಅಂದ್ರೆ ಬಹಳಷ್ಟು ಕನ್ನಡಿಗರ ಆರೋಪ :ಗುಣಮಟ್ಟ ಕಳಪೆ ಅಥವಾ ಉತ್ತಮ ಕಥೆ, ಸಂಗೀತ ,ಸಾಹಿತ್ಯ ಇಲ್ಲ ಅಂತ .ಇದಕ್ಕೆ ಸಂಭಂಧ ಪಟ್ಟವರು ಯೋಚಿಸಬೇಕು .ನಾವು ಬರೀ ಆರೋಪ ಮಾಡ್ತಾ ಇದಿವಿ .ಯಾಕೆ ಹೀಗೆ , ಏನು ಮಾಡಬಹುದು ಅನ್ನವುದರ ಕಡೆ ಗಮನವಿಲ್ಲ .ಇರುವ FM Radio ಚಾನೆಲ್ ಗಳಲ್ಲಿನ RJ ಗಳು  ಮಾತನಾಡುವ  ಕನ್ನಡ  ಆಂಗ್ಲ ಭಾಷೆ ಮಿಶ್ರಿತ .ಅವರಿಗೆ ಕನ್ನಡದ ಪಾಠ ಮಾಡುವ ಮೇಸ್ಟ್ರುಗಳ ಸಲಹೆ ಬೇಕು ಅನ್ಸುತ್ತೆ  .FM ರೈನ್ಬೌ ೧೦೧.೩ ಇದಕ್ಕೆ ಅಪವಾದ .ಇದೊಂದು ಸಮಾಧಾನದ ವಿಷಯ .ಇತ್ತೀಚೀನ ವರ್ಷಗಳಲ್ಲಿ ಹಲವರು ಕನ್ನಡ Channels ಬಂದಿರುವುದು ಭಾಷೆ ಉಳಿಯಲು - ಬೆಳೆಯಲು ಉಪಯೋಗ ಆಗುತ್ತಿದೆ .

ಇಂದು ನಾವು ಬೆಂಗಳೊರಿನಲ್ಲಿ ಬೇರೆ ರಾಜ್ಯದವರ ಮನೆಯಲ್ಲಿ ಬಾಡಿಗೆ ಇರಬೇಕಾದ ಪರಿಸ್ಥಿತಿ ಇದೆ .ಇನ್ನು site ತೆಗೆದು ಕೊಳ್ಳುವುದು ಬಹಳ ದೂರದ ಮಾತು ಆಯಿತು  ನಾವ್ಯಾಕೆ ನಮ್ಮವರನ್ನು ನಮ್ಮವರಿಗಾಗಿ ಸಹಾಯ ಮಾಡಲು ಮೀನ ಮೇಷ ಎಣಿಸುತ್ತಿದ್ದೇವೆ. ನಾವು ಅಸ್ಟೊಂದು   ಸ್ವಾರ್ಥಿ ಗಳಾಗಿ ಬಿಟ್ಟಿದ್ದೇವೆಯಾ ? ಅಥವಾ ನಮಗೆ ನಮ್ಮೆ ಭಾಷೆ , ನೆಲದ ಬಗ್ಗೆ ಗಮನವಿಲ್ವ ? ಅಕ್ಕ ಪಕ್ಕದ ರಾಜ್ಯದವರಿಂದ ಸ್ವಲ್ಪ ಭಾಷಾಭಿಮಾನ ಕಲಿಯೋಣ . ಕನ್ನಡಕ್ಕಾಗಿ ದುಡಿದವರು ಮಡಿದವರಿಗೆ ಲೆಕ್ಕವಿಲ್ಲ. ಅವರ ಕೊಡುಗೆ, ಸೇವೆಯನ್ನ ನೆನೆದು ನಮ್ಮ ಭಾಷೆ , ನೆಲವನ್ನು ಬೆಳೆಸೋಣ.

ಇನ್ನು ನಮ್ಮ ಕನ್ನಡಿಗರ -ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಂಘಗಳು ಯಾಕೆ ಬೇಕು ? ನಾವು ಕನ್ನಡದಲ್ಲಿ ಮಾತನಾಡಲು ಅಪ್ಪ.ಅಮ್ಮ ಅಣ್ಣ ಅಕ್ಕ, ಅತ್ತೆ ಮಾಮ , ಎನ್ನಲು  ಹಿಂಜರಿಕೆ ಯಾಕೆ ? ಇನ್ನು M.G.ರಸ್ತೆ , Brigade ರಸ್ತೆ , commercial ರಸ್ತೆ , ದೊಡ್ಡ ಶಾಪಿಂಗ್ ಮಾಲ್ ಗಳಲ್ಲಿ ಕನ್ನಡ ಮಾತನಾದುವರನ್ನು ಕಂಡರೆ ಓಹೋ ನಾವಿನ್ನು ಬೆಂಗಳೂರಿನಲ್ಲಿ ಇದಿವಿ ಅಂತ ಖಾಯಂ ಅನ್ನೋ ಪರಿಸ್ಥಿತಿ ನಿರ್ಮಾಣ  ಮಾಡಿಕೊಂಡಿದ್ದೇವೆ .

 ಇನ್ನು ಬಂದು ಹೋಗಿರುವ -ಇರುವ ಸರ್ಕಾರಗಳಿಗೆ ಕನ್ನಡ ವನ್ನು ಆಡಳಿತದಲ್ಲಿ ಬಳಸಲು ಅದ್ಯಾವ ಗರ ಬಡಿದಿದೆಯೂ ಗೊತ್ತಿಲ್ಲ , ಅದೇನು ಕಷ್ಟ ? ಕನ್ನಡದಲ್ಲಿ ಹುಟ್ಟಿ ಬೆಳೆದ ಜನರಗೆ ಬೆಲೆ  ಇಲ್ಲವ .ಬೇರೆ ರಾಜ್ಯದಲ್ಲಿ  ಈ ಸ್ಥಿತಿ ಇಲ್ವಲ್ಲ .ನಮ್ಮ ರಾಜ್ಯ ದಲ್ಲಿ  ವಿದ್ಯೆಯನ್ನು ಕಲಿತವರಿಗೇನು ಕೊರತೆ ಇಲ್ಲ , ಬುದ್ಧಿ ವoತರೂ ಇದ್ದಾರೆ .ಹೀಗಿದ್ದಾಗ ಸಮಸ್ಯೆ ನಮ್ಮ ಕನ್ನಡವನ್ನು ಬೆಳೆಸುವ -ಉಳಿಸುವ , ಕನ್ನಡಿಗರಿಗೆ ಒಬ್ಬರೊನ್ನಬರಿಗೆ ಸಹಾಯ ಮಾಡುವ  ಇಚ್ಚಾ ಶಕ್ತಿಯ ಕೊರತೆ ಇರುವದರಲ್ಲಿ ಅನುಮಾನವಿಲ್ಲ.

ಬನ್ನಿ ಇನ್ನಾದರೂ ಎಚ್ಚೆತ್ತು ಕೊಳ್ಳೋಣ . ಇಲ್ಲ ವಾದಲ್ಲಿ ಮುಂದೆ ಒಂದು ದಿನ ನಮ್ಮ ಕನ್ನಡ ನಾಡಿನಲ್ಲಿ ಸಾಮಾನ್ಯ ಜನ  ಜೀವಿಸಲು ಕಷ್ಟ ವಾದೀತು

ನಮ್ಮ ಕನ್ನಡದ-ಕರ್ನಾಟಕ ದ ಬಗೆಗಿನ ಕೆಲವು ಉತ್ತಮ ವಾದ ವೀಡಿಯೊ ಗಳನ್ನು ನೋಡೋಣ ಬನ್ನಿ :

http://www.youtube.com/watch?v=dBo1tB4q1go

http://www.youtube.com/watch?v=3GmTQg49UqM

http://www.youtube.com/watch?v=dtVT2-IhlPg

ಜೈ ಕರ್ನಾಟಕ ಮಾತೆ , ಸಿರಿಗನ್ನಡಂ ಗೆಲ್ಗೆ  ಸಿರಿಗನ್ನಡಂ ಬಾಳ್ವೆ
---------------------------------------------